ಮಂಗಳೂರು, ಫೆ 20: ನಗರದ ಬಜಾಲ್ ಜೆ.ಎಂ.ರೋಡ್ನಲ್ಲಿ ಅಕ್ರಮವಾಗಿ ಸ್ಪಿರಿಟ್ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ಮಂಗಳೂರು ಅಬಕಾರಿ ಇಲಾಖೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಜಾಲ್ ಜೆ.ಎಂ.ರೋಡ್ನ ಜೋಸ್ ಸೆಬಾಸ್ಟಿನ್ ಮನೆಯಲ್ಲಿ ಅಕ್ರಮ ಸ್ಪಿರಿಟ್ ದಾಸ್ತಾನು ಇರಿಸಲಾಗಿದೆ ಎನ್ನುವ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, 11 ಲಕ್ಷ ರೂಪಾಯಿ ಮೌಲ್ಯದ 200 ಕ್ಯಾನ್ ಅಂದಾಜು 7,೦೦೦ ಲೀ.ಗಳಷ್ಟು ಸ್ಪಿರಿಟ್ ಪತ್ತೆಯಾಗಿದೆ.
ಸ್ಪಿರಿಟ್ ಸಾಗಾಟಕ್ಕೆ ಬಳಸುತ್ತಿದ್ದ ಈಚರ್ ಲಾರಿ, ಪಲ್ಸರ್ ಬೈಕ್, ಮದ್ಯಸಾರ, ಮೀನು ದಾಸ್ತಾನಿಗೆ ಬಳಸುವ ಕ್ರೇಟ್ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಈ ಸ್ಪಿರಿಟ್ಗಳನ್ನು ಆರೋಪಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಎಂದು ತನಿಖೆ ವೇಳೆ ತಿಳಿಸಿದ್ದಾನೆ.
ಈ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಚೇತನ್ ಕುಮಾರ್, ಸತೀಶ್ ಕುದ್ರೋಳಿ, ಸುನೀತ, ಸೀಮ, ಶೋಭ, ಅಬಕಾರಿ ಉಪನಿರೀಕ್ಷರಾದ ಪ್ರತಿಭಾ, ರಾಜ, ಜಗನ್ನಾಥ ನಾಯಕ್, ಶಿವಾನಂದ, ಕಮಲ, ಅಬಕಾರಿ ರಕ್ಷಕರಾದ ಸಾಯಿ, ಉಮೇಶ್, ಹರೀಶ್, ಅರ್ಜುನ್ ಗೊಟಗುಣಕಿ, ಜಯಪ್ಪ, ಲಮಣಿ, ಕೃಷ್ಣ ಆಚಾರಿ, ವಾಹನ ಚಾಲಕರಾದ ಸುಪ್ರೀತ್, ಸುನಿಲ್, ಹರಿಯಪ್ಪ, ಶಿವಪ್ಪ, ಯೋಗೀಶ್, ಫ್ರಾನ್ಸಿಸ್ ಮತ್ತಿತರರಿದ್ದರು.