ಬಂಟ್ವಾಳ, ಮಾ 17(DaijiworldNews/SM): ಅಕ್ರಮವಾಗಿ ಮರಳುಗಾರಿಕೆಗೆ ಸಂಬಂಧಿಸಿದ ಡ್ರಜ್ಜಿಂಗ್ ಮೆಷಿನ್ ಒಂದನ್ನು ಮಂಗಳೂರು ಗಣಿ ಇಲಾಖೆಯವರು ವಶಕ್ಕೆ ತೆಗೆದುಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕರಿಂಯಂಗಳ ಎಂಬಲ್ಲಿ ನಡೆದಿದೆ.
ಕರಿಯಂಗಳ ಗ್ರಾಮ ಫಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆಗೆ ಬಳಸಿರುವ ಡ್ರಜ್ಜಿಂಗ್ ಮೆಷಿನ್ ಒಂದನ್ನು ಗಣಿ ಇಲಾಖೆಯವರು ವಶಕ್ಕೆ ಪಡೆದುಕೊಂಡು ಬಳಿಕ
ಗಂಜಿ ಮಠ ಯಾರ್ಡ್ ನಲ್ಲಿ ಇಡಲಾಗಿದೆ.
ಈ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಪಡೆಯುವ ಉದ್ದೇಶದಿಂದ ಗಣಿ ಇಲಾಖೆಗೆ ಪೋನ್ ಸಂಪರ್ಕ ಮಾಡಿದರೆ ಅಲ್ಲಿ ಯಾವ ಅಧಿಕಾರಿಯೂ ಕರೆ ಸ್ವೀಕಾರ ಮಾಡಿಲ್ಲ. ಈ ಹಿಂದೆ ಅನೇಕ ಬಾರಿ ವರದಿಯ ಸ್ಪಷ್ಟನೆಗಾಗಿ ಕರೆ ಮಾಡಿದಾಗಲೂ ಇದೇ ಸ್ಥಿತಿಯಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.