ಮಂಗಳೂರು, ಫೆ 21 : ನಗರದ ಮಲ್ಪೆಯಲ್ಲಿ ನಡೆದ ಬಿ ಜೆ ಪಿ ಮೀನುಗಾರರ ಸಮಾವೇಶದಲ್ಲಿ ಪಾಲ್ಗೊಂಡು ಬಸ್ಸಿನಲ್ಲಿ ತೆರಳುತ್ತಿದ್ದ ಯುವಕರನ್ನು ಕಸಬ ಬೆಂಗರೆ ಯಲ್ಲಿ ತಡೆದ ಅಪರಿಚಿತ ತಂಡವೊಂದು ಹಲ್ಲೆಗೆ ಮುಂದಾದ ಘಟನೆ ಫೆ. 20 ರ ಮಂಗಳವಾರ ನಡೆದಿದೆ. ಮೊದಲು ಘೋಷಣೆ ಕೂಗುತ್ತ ಈ ಅಪರಿಚಿತ ತಂಡ ಯುವಕರ ಮೇಲೆ ವಾಗ್ವಾದಕ್ಕಿಳಿದಿದೆ. ಬಳಿಕ ಅಲ್ಲಿ ಪರಿಸ್ಥಿತಿ ತಿಳಿಗೊಂಡು ತೋಟ ಬೆಂಗ್ರೆಯತ್ತ ಹೋಗುತ್ತಿದ್ದಂತೆ ತಂಡ ಯುವಕರನ್ನು ಅಡ್ಡಗಟ್ಟಿ ತಂಡ ಹಲ್ಲೆ ನಡೆಸಿದೆ.
ಘಟನೆ ನಡೆದ ಬಳಿಕ ಎರಡು ಗುಂಪುಗಳ ಜನ ಸೇರಿದ್ದು ,ಮಾತಿನ ಚಕಮಕಿ ನಡೆದಿದೆ.ಬಳಿಕ ಪರಿಸ್ಥಿತಿ ವಿಕೋಪಕ್ಕೆ ತೆರಳಿ ಕಲ್ಲು ತೂರಾಟ ನಡೆದಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಲಾಠಿ ಚಾರ್ಜ್ ನಡೆಸಿ ಎರಡು ತಂಡದವರನ್ನು ಚದುರಿಸಿದ್ದಾರೆ. ಘಟನೆಯಿಂದ ಗಾಯಗೊಂಡ ಲೋಕೇಶ್, ರಾಹುಲ್, ಮೀರ್ ಹಸನ್ ಎಂಬವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತು ಕಲ್ಪಿಸಲಾಗಿದೆ.