ಮಂಗಳೂರು, ಮಾ.18 (Daijiworld News/MB) : ಪುತ್ತೂರಿನ ವ್ಯಕ್ತಿಯೋರ್ವನಲ್ಲಿ ಕೊರೊನಾ ವೈರಸ್ ಇರುವ ಶಂಕೆ ಉಂಟಾಗಿದ್ದು ವ್ಯಕ್ತಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಶಂಕಿತ ವ್ಯಕ್ತಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಮಂಗಳವಾರ ರಾತ್ರಿಯವರೆಗೆ 456 ಜನರ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗಿದ್ದು ೭ ಜನರ ಮೇಲೆ ನಿಗಾ ವಹಿಸಲಾಗಿದೆ. 241 ಜನರಿಗೆ ಮನೆಯಕ್ಕಿ ನಿಗಾ ಇರಿಸಲಾಗಿದೆ. ಒಟ್ಟು 14 ಜನರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 10 ಜನರ ವರದಿ ಬಂದಿದ್ದು ಯಾರಲ್ಲೂ ಕೊರೊನಾ ದೃಢಪಟ್ಟಿಲ್ಲ.