ಉಳ್ಳಾಲ, ಮಾ.19 (Daijiworld News/MB) : ಬಾರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಟರ್ ಹೃದಯಾಘಾತದಿಂದಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ತೊಕ್ಕೊಟ್ಟು ಮಾಯಾ ಬಾರ್ನಲ್ಲಿ ಬುಧವಾರ ತಡರಾತ್ರಿ ವೇಳೆ ನಡೆದಿದೆ.
ಮೃತರನ್ನು ಕೈಕಂಬ ನಿವಾಸಿ ಜಗದೀಶ್ (50) ಎಂದು ಗುರುತಿಸಲಾಗಿದೆ.
ಹಲವು ವರ್ಷಗಳಿಂದ ತೊಕ್ಕೊಟ್ಟು ಬಾರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಬುಧವಾರ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಕುಸಿದುಬಿದ್ದಿದ್ದಾರೆ. ಹೃದಯಘಾತಕ್ಕೆ ತುತ್ತಾಗಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.