ಕಾರ್ಕಳ, ಮಾ 19 ( Daijiworld News/MSP): ಕಾಬೆಟ್ಟು ಜಂಕ್ಷನ್ನಲ್ಲಿ ಹಾಡುಹಗಲಿನಲ್ಲಿ ಕಾರಿನಲ್ಲಿ ಇರಿಸಲಾಗಿದ್ದ ರೂ. ೨ ಲಕ್ಷ ನಗದು ಕಳವುಗೈದ ಪ್ರಕರಣವನ್ನು ಭೇದಿಸಿದ ನಗರ ಠಾಣಾಧಿಕಾರಿ ಮಧು ನೇತೃತ್ವದ ಪೊಲೀಸರ ತಂಡವು ಚಿಕ್ಕಮಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕಾರ್ಯಚರಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂದ್ರಪ್ರದೇಶ ಚಿತ್ತೂರು ಜಿಲ್ಲೆಯ ನಗರಿಯ ಓಜಿಗುಪ್ಪಂ ನಟೋರಿಯಸ್ ತಂಡದ ಸದಸ್ಯ ಹರಿಕೃಷ್ಣ(32) ಎಂಬಾತನ್ನು ಬಂಧಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೃತ್ಯಕ್ಕೆ ಬಳಸಲಾಗಿದ್ದ ಬೈಕ್ವೊಂದನ್ನು ವಶಪಡಿಸಿದ್ದಾರೆ.
ಡಿಸೈಎಸ್ಪಿ ಭರತ್ ರೆಡ್ಡಿಯವರ ಅದೇಶದಂತೆ ವೃತ್ತನಿರೀಕ್ಷಕ ಸಂಪತ್ಕುಮಾರ್ ನಿರ್ದೇಶನದಂತೆ ಠಾಣಾಧಿಕಾರಿ ಮಧು ಬಿ.ಇ ನೇತೃತ್ವದಲ್ಲಿ ಪೊಲೀಸರ ತಂಡದಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ಅಪರಾಧ ಪತ್ತೆದಳದ ಸಿಬ್ಬಂದಿ ಪ್ರಶಾಂತ್, ನಗರ ಠಾಣೆಯ ಸಿಬ್ಬಂದಿ, ಸಂಜತ್, ಗ್ರಾಮಾಂತರ ಠಾಣಾ ಸಿಬ್ಬಂದಿ ರಮೇಶ್, ಡಿಸಿಐಬಿ ಘಟಕದ ಶಿವಾನಂದ, ಕಾರ್ಕಳ ವೃತ್ತನಿರೀಕ್ಷಕ ಕಚೇರಿಯ ಸಿಬ್ಬಂದಿ ಗಿರೀಶ್ ಯು.ಆರ್. ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ಮಾರ್ಚ್ 7ರಂದು ಶನಿವಾರ ಮಧ್ಯಾಹ್ನ 12.00 ಗಂಟೆಗೆ ಕಾಬೆಟ್ಟು ಜಂಕ್ಷನ್ನಲ್ಲಿ ನಿಲ್ಲಿಸಿದ ಕಾರಿನ ಕವರಿನೊಳಗೆ ಇರಿಸಲಾಗಿದ್ದ ರೂ. 2 ಲಕ್ಷ ನಗದನ್ನು ಬೈಕ್ನಲ್ಲಿ ಬಂದಿದ್ದ ಆರೋಪಿಗಳಿಬ್ಬರು ಕಳವುಗೈದು ಪರಾರಿಯಾಗಿದ್ದರು. ಈ ಕುರಿತು ಅಂದು ಅತ್ತೂರು ಗುಂಡ್ಯಡ್ಕದ ವಿನ್ಸೆಂಟ್ ನವೀನ್ ಕ್ಯಾಸ್ತಲಿನೋ ಎಂಬವರ ಪತ್ನಿ ಮಾಲಿನಿ(29) ನಗರ ಠಾಣೆಗೆ ದೂರು ಸಲ್ಲಿಸಿದ್ದರು.