ಮಂಗಳೂರು, ಮಾ 19 (DaijiworldNews/SM): ಕೊರೋನಾ ವೈರಸ್ ಭೀತಿಯಿಂದ ಸರಕಾರವು ನಿರ್ಬಂಧಕಾಜ್ಞೆ ವಿಧಿಸಿದ ಹಿನ್ನೆಲೆ ಇದರ ಬಿಸಿ ಮಸೀದಿ ಪ್ರಾರ್ಥನೆಗಳಿಗೂ ತಟ್ಟಿದೆ.
ಆರೋಗ್ಯ ಸುರಕ್ಷತೆಯ ನಿಟ್ಟಿನಲ್ಲಿ ಮಂಗಳೂರು ನಗರ ಮತ್ತು ಹೊರವಲಯದ ಕೆಲವು ಮಸೀದಿಗಳಲ್ಲಿ ಶುಕ್ರವಾರದ ಜುಮಾ ನಮಾಝ್ನ ಸಮಯದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಶುಕ್ರವಾರ ನಡೆಯುವ ನಮಾಜ್ 15 ನಿಮಿಷದಲ್ಲಿ ಮುಗಿಸಲು ಉಭಯ ಜಿಲ್ಲೆಯ ಖಾಝಿಗಳು ಈಗಾಗಲೆ ಮನವಿ ಮಾಡಿದ್ದಾರೆ.
ಇನ್ನು ಈಗಾಗಲೇ ಜಿಲ್ಲೆಯಲ್ಲಿ ದೇವಸ್ಥಾನ ಹಾಗೂ ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳನ್ನು ರದ್ದುಗೊಳಿಸಲಾಗಿದೆ. ಕೊರೊನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಉಳಿದಂತೆ ವೈಯುಕ್ತಿಕ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ. ಇದೇ ಮಾದರಿಯಲ್ಲಿ ಇದೀಗ ಮಸೀದಿಯಲ್ಲೂ ಕೂಡ ನಮಾಜ್ ಸಮಯವನ್ನು ಕಡಿತಗೊಳಿಸಲಾಗಿದೆ.