ಕಾಸರಗೋಡು, ಮಾ.20 (DaijiworldNews/PY) : ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶೇಂದಿ ಅಂಗಡಿ ಹರಾಜು ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮತ್ತು ಯೂತ್ ಲೀಗ್ ಕಾರ್ಯಕರ್ತರು ಸಭಾಂಗಣಕ್ಕೆ ನುಗ್ಗಲೆತ್ನಿಸಿ ಅಡ್ಡಿಪಡಿಸಲೆತ್ನಿಸಿದ ಘಟನೆ ಶುಕ್ರವಾರ ನಡೆದಿದ್ದು, ಪ್ರತಿಭಟನಾಕಾರನ್ನು ಪೊಲೀಸರು ಬಂಧಿಸಿದ್ದಾರೆ.
ಘೋಷಣೆ ಕೂಗುತ್ತಾ ಸಭಾಂಗಣಕ್ಕೆ ನುಗ್ಗಲೆತ್ನಿಸಿದ್ದು ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು .
ಪ್ರತಿಭಟನೆ ನಡೆಯುವ ಮಾಹಿತಿ ಲಭಿಸಿದ್ದರಿಂದ ಸಭಾಂಗಣದ ಪರಿಸರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಬಂದೋಬಸ್ತನ್ನು ಲೆಕ್ಕಿಸದೆ ಕಾರ್ಯಕರ್ತರು ಸಭಾಂಗಣಕ್ಕೆ ನುಗ್ಗಲು ಯತ್ನಿಸಿದ್ದು ಇದರಿಂದ ಹಲವು ಸಮಯ ಹರಾಜು ಪ್ರಕ್ರಿಯೆಗೆ ಅಡಚಣೆಯಾಯಿತು. ಕಾರ್ಯಕರ್ತರನ್ನು ಬಂಧಿಸಿದ ಬಳಿಕ ಹರಾಜು ಪ್ರಕ್ರಿಯೆ ಮುಂದುವರೆಯಿತು.