ಬೆಳ್ತಂಗಡಿ, ಮಾ 21 ( Daijiworld News/MSP): :ಗುರುವಾರ ದಾಳಿ ನಡೆಸಿ, ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಲ್ಲಿನ ಸ್ಥಳೀಯ ನಿವಾಸಿಯೊಬ್ಬರ ಸ್ಥಳದಲ್ಲಿರುವ ಕಪ್ಪು ಕಲ್ಲಿನ ಕೋರೆಗೆ ಗುರುವಾರ ದಾಳಿ ನಡೆಸಿದ ಸಂದರ್ಭ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳು ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಎರಡು ಹಿಟಾಚಿ, ಒಂದು ಟ್ರ್ಯಾಕ್ಟರ್ ವಶಕ್ಕೆ ಪಡೆಯಲಾಗಿದೆ.
ವಶ ಪಡಿಸಿಕೊಂಡ ಸೊತ್ತುಗಳ ಮೌಲ್ಯ ಸುಮಾರು 25 ಲಕ್ಷ ರೂ. ಅಂದಾಜಿಸಲಾಗಿದ್ದು, ಮುಂದಿನ ಕ್ರಮಕ್ಕಾಗಿ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ.
ಪತ್ರಕರ್ತನೆಂದು ಬೆದರಿಕೆ:
ಅಕ್ರಮ ಗಣಿಕಾರಿಕೆಯ ಪ್ರಧಾನ ಆರೋಪಿ ಪ್ರತೀಕ್ ಕೋಟ್ಯಾನ್ ಪತ್ರಕರ್ತನೆಂದು ಹೇಳಿಕೊಂಡು ಅಧಿಕಾರಿಗಳನ್ನು ಪೊಲೀಸರನ್ನು ಯಾಮರಿಸುತ್ತಿದ್ದನೆಂದು ತಿಳಿದುಬಂದಿದೆ. ಈ ವ್ಯಾಪ್ತಿಯಲ್ಲಿ ಆರೋಪಿ ಕಲ್ಲುಕೋರೆ ಮಾತ್ರವಲ್ಲದೆ ಮರಳು ದಂಧೆಯನ್ನು ನಡೆಸುತ್ತಿದ್ದು ಇದಕ್ಕೆ ಅಕ್ರಮ ಮಟ್ಟ ಹಾಕಬೇಕಾದ ಕೆಲವು ಅಧಿಕಾರಿಗಳು ಬೆಂಬಲ ನೀಡುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ