ಮಂಗಳೂರು, ಮಾ21 ( Daijiworld News/MSP): ಕೊರೊನಾ ಭೀತಿ ಹಿನ್ನಲೆಯಲ್ಲಿ ಪ್ರಧಾನಿ ಕರೆ ನೀಡಿದ ಜನತಾ ಕರ್ಪ್ಯೂ ಗೆ ದ.ಕ, ಉಡುಪಿ, ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ಯವಾಗಿದೆ . ಹೀಗಾಗಿ ಭಾನುವಾರ ಕರಾವಳಿ ಸಂಪೂರ್ಣ ಸ್ತಬ್ದಗೊಳ್ಳುವ ನಿರೀಕ್ಷೆ ಇದೆ.
ಪ್ರಧಾನಿಯವರ ಜನತಾ ಕರ್ಪ್ಯೂ ಕರೆಗೆ ಮಾ.22 ರಂದು ಕರಾವಳಿಯಲ್ಲಿ ತುರ್ತು ಸೇವೆಗಳು ಹೊರತುಪಡಿಸಿ ಉಳಿದಂತೆ ಬಹುತೇಕ ಬಂದ್ ಆಗುವ ಸಾಧ್ಯತೆ ಇದೆ. ಖಾಸಗಿ ಬಸ್ ಗಳು, ಹೆಚ್ಚಿನ ಆಟೋ ಸಂಘಟನೆಗಳು ಕರ್ಪ್ಯೂ ಗೆ ಬೆಂಬಲ ಸೂಚಿಸಿದ್ದರಿಂದ ಸಂಚಾರ ಸ್ಥಗಿತಗೊಳ್ಳಲಿದೆ.
ಮಂಗಳೂರು ಮತ್ತು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಯಾವುದೇ ರೀತಿಯ ಮೀನುಗಾರಿಕಾ ವ್ಯವಹಾರಗಳು ನಡೆಯುದಿಲ್ಲ ಎಂದು ಮೀನಿಗಾರರು ತಿಳಿಸಿದ್ದಾರೆ. ಜನತಾ ಕರ್ಪ್ಯೂ ಆಚರಿಸುವ ಹಿನ್ನಲೆಯಲ್ಲಿ ಬಸ್ ಸಂಚಾರ ಸ್ಥಗಿತ ಮಾಡಲಿ ನಿರ್ಧರಿಸಲಾಗಿದೆ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಅಳ್ವ , ಉಡುಪಿ ಸಿಟಿ ಬಸ್ ಮಾಲಕರ ಅಧ್ಯಕ್ಷ ಕೆ.ಸುರೇಶ್ ನಾಯಕ್ ತಿಳಿಸಿದ್ದಾರೆ.
ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಬಗ್ಗೆ ಇನ್ನೂ ನಿರ್ಧಾರವಗಿಲ್ಲ ಎಂದು ಕೆ.ಎಸ್ ಆರ್.ಟಿ.ಸಿ ಅಧಿಕಾರಿಗಳು ತಿಳಿಸಿದ್ದಾರೆ.