ಫರಂಗಿಪೇಟೆ, ಫೆ 22 : ಎರಡು ಗುಂಪುಗಳ ಮದ್ಯೆ ನಡೆದ ಗಲಭೆಯಲ್ಲಿ ಯುವಕನಿಗೆ ಚೂರಿ ಇರಿದ ಘಟನೆ ಬಂಟ್ವಾಳದ ಫರಂಗಿಪೇಟೆಯಲ್ಲಿ ನಡೆದಿದೆ. ಮೊದಲಿಗೆ ಗುಂಪುಗಳ ಮದ್ಯೆ ಮಾತಿನ ಚಕಮಕಿ ಪ್ರಾರಂಭವಾಗಿದ್ದು, ಬಳಿಕ ಜಗಳ ಚೂರಿ ಇರಿತದಲ್ಲಿ ಈ ಜಗಳ ಕೊನೆಯಾಗಿದೆ. ಫರಂಗಿಪೇಟೆಯ ಒಳಮಾರ್ಗದ ನದಿತಟದಲ್ಲಿ ಫೆ.21ರ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು ಫರಂಗಿಪೇಟೆಯ ನಿವಾಸಿ ಇರ್ಫಾನ್ ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇನ್ನು ಗಾಯಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನದಿ ತಟದಲ್ಲಿ ಚಾಕು ಹಾಗೂ ರಕ್ತಸಿಕ್ತ ವಸ್ತುಗಳನ್ನು ಕಂಡ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ವೈಯಕ್ತಿಕ ದ್ವೇಷವೇ ಕಾರಣ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.