ಕಾರ್ಕಳ, ಮಾ21 ( Daijiworld News/MSP): ಶುಕ್ರವಾರ ತಡರಾತ್ರಿ ಪುರಸಭೆ ವ್ಯಾಪ್ತಿಯಲ್ಲಿ ಕರಿಯಕಳ್ಳು ಡಂಪಿಂಗ್ ಯಾರ್ಡ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನಿರ್ವಹಣೆಯಲ್ಲಿ ಉಂಟಾದ ಲೋಪದೋಷವೇ ಘಟನೆಗೆ ಕಾರಣವೆನ್ನಲಾಗಿದೆ. ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಕಾರ್ಕಳದ ಗುಂದ್ಯಡ್ಕ ಶ್ಮಶಾನ ಹತ್ತಿರ 10 ಎಕ್ರೆ ಜಾಗದಲ್ಲಿ 2 ಎಕರೆಗೆ ಬೆಂಕಿ ತಗುಲಿ ಹಾನಿ ಆಗಿದೆ. ಜಾರಿಗೆ ಕಟ್ಟೆ ಎಂಬಲ್ಲಿ ಗುಡ್ಡ ಕ್ಕೆ ಬೆಂಕಿ ತಗುಲಿ ಸುಮಾರು 20 ಎಕರೆ ಗೆ ಬಿಂಕಿ ಆಗಿದೆ . ಮಂಜರಪಲ್ಕೆ ಎಂಬಲ್ಲಿ ಹಾಡಿಗೆ ಬೆಂಕಿ ತಗುಲಿ 3 ಎಕರೆಗೆ ಹಾನಿಗೊಂಡಿದೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬಿಎಂ ಸಂಜೀವ್ ,ದಾಫೆದಾರ್ ಹೊನ್ನಯ್ಯ,ರೂಪೇಶ್ ಸಿಬ್ಬಂದಿಗಳಾದ ರಫೀಕ್ ,ಮನೋಹರ್,ಸುರೇಶ್ ಕುಮಾರ್ ,ಸುಜಯ್ ನಾಯಕ್ . ಹಸನ್ , ಪ್ರಸಾದ್ ,ಚಂದ್ರಶೇಕರ್ . ನಿತ್ಯಾನಂದ,ಸಚಿನ್ ಪಾಲ್ಗೊಂಡಿದ್ದರು.