ಮಂಗಳೂರು, ಮಾ.21 (DaijiworldNews/PY) : ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಅವರು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕರ್ಫ್ಯೂಗೆ ಸಂಬಂಧಪಟ್ಟಂತೆ ಭಾನುವಾರ ಸಂಜೆ 5 ಗಂಟೆಗೆ ಧರ್ಮಪ್ರಾಂತ್ಯದ 124 ಚರ್ಚ್ಗಳಲ್ಲಿ ಏಕಕಾಲದಲ್ಲಿ ಚರ್ಚ್ ಗಂಟೆ ಬಾರಿಸುವ ಮುಖಾಂತರ ಕೊರೊನಾ ವೈರಸ್ ಭೀತಿಯ ವಾತಾವರಣದ ನಡುವೆಯೂ ರೋಗಿಗಳ ಪರವಾಗಿ ಸೇವೆ ಸಲ್ಲಿಸುತ್ತಿರುವರಿಗೆ ಅಭಿನಂದನೆ ಸಲ್ಲಿಸಲಾಗುವುದು.
ಕೊರೊನಾ ವೈರಸ್ ಆತಂಕದ ವಾತಾವರಣದ ನಡುವೆಯೂ ರೋಗಿಗಳ ಪರವಾಗಿ ಸೇವೆ ಸಲ್ಲಿಸುತ್ತಿರುವ ದಾದಿಯರು, ವೈದ್ಯರು ಮತ್ತು ಪ್ಯಾರಾ ಮೆಡಿಕಲ್ ಸೇವೆಸಲ್ಲಿಸುತ್ತಿರುವ ಮಂದಿಯ ಕಾರ್ಯವನ್ನು ಸ್ಮರಿಸುವುದರೊಂದಿಗೆ ಅವರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯವು ನಡೆಯಲಿದೆ. ಇದರೊಂದಿಗೆ ಏರ್ ಲೈನ್ಸ್ ಹಾಗೂ ಸಂಚಾರ ವ್ಯವಸ್ಥೆಯಲ್ಲೂ ಕಾರ್ಯ ನಿರ್ವಹಿಸುತ್ತಿರುವ ಕೆಲಸಗಾರರ ಕಾರ್ಯವನ್ನೂ ಸ್ಮರಿಸಲಾಗುವುದು ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಪಿಆರ್ ಒ ಫಾ.ವಿಜಯ್ ವಿಕ್ಟರ್ ಲೋಬೊ ಅವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.