ಮಂಗಳೂರು, ಮಾ.22 (Daijiworld News/MB) : ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಜನರು ಸ್ವಯಂಪ್ರೇರಿತರಾಗಿ ‘ಜನತಾ ಕರ್ಫ್ಯೂ’ವಿನಲ್ಲಿ ಪಾಲ್ಗೊಂಡಿದ್ದು ಪೌರ ಕಾರ್ಮಿಕರು ಮಾತ್ರ ಎಂದಿನಂತೆ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪೌರಕಾರ್ಮಿಕರು ಎಂದಿನಂತೆ ನಗರದ ಸೆಂಟ್ರಲ್ ಮಾರ್ಕೆಟ್ ಸಹಿತ ವಿವಿಧ ಮಾರ್ಕೆಟ್ಗಳು, ಹಂಪನಕಟ್ಟೆ, ಸ್ಟೇಟ್ಬ್ಯಾಂಕ್ ಮತ್ತಿತರ ಕಡೆ ಮಾಸ್ಕ್ ಧರಿಸಿ ತ್ಯಾಜ್ಯವಸ್ತುಗಳ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದಾರೆ.
ಭಾರತವೇ ಜನತಾ ಕರ್ಫ್ಯೂ ಹಿನ್ನಲೆ ಮನೆಯಿಂದ ಹೊರ ಬರೆದಿರುವ ಈ ದಿನ ಒಂದು ದಿನ ಪೌರಕಾರ್ಮಿಕರು ಈ ತ್ಯಾಜ್ಯಗಳನ್ನು ತೆರವುಗೊಳಿಸದೇ ಇದ್ದರೆ ಅನಾರೋಗ್ಯಕ್ಕೆ ದೊಡ್ಡ ಕೊಡುಗೆ ನೀಡುವ ಅಪಾಯದ ಕಾರಣದಿಂದಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.