ಕಾಸರಗೋಡು, ಮಾ.22 (DaijiworldNews/PY) : ಕೊರೊನಾ ಸೋಂಕಿಗೆ ಔಷಧಿ ಎಂದು ನಂಬಿಸಿ ದ್ರವರೂಪದ ವಸ್ತುವನ್ನು ಮಾರಾಟ ಮಾಡುತ್ತಿದ್ದ ನಕಲಿ ವೈದ್ಯನೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ವಿದ್ಯಾನಗರ ಚಾಲದ ಹಂಝ ಎಂದು ಗುರುತಿಸಲಾಗಿದೆ.
ಕೊರೊನಾ ಔಷಧಿ ಎಂದು ಬಾಟಲಿಗಳಲ್ಲಿ ಯಾವುದೋ ರೀತಿಯ ದ್ರವ ಪದಾರ್ಥವನ್ನು ತುಂಬಿಸಿ ಈತ ಮಾರಾಟ ಮಾಡುತ್ತಿದ್ದನು. ಈ ಬಗ್ಗೆ ಮಾಹಿತಿ ಲಭಿಸಿ ಪೊಲೀಸರು ದಾಳಿ ನಡೆಸಿ ಈತನನ್ನು ಬಂಧಿಸಿದ್ದಾರೆ. ಅಲ್ಲದೆ ನೂರಾರು ಬಾಟಲಿ ದ್ರವ ವಸ್ತುವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.