ಕಾಸರಗೋಡು, ಮಾ.22 (Daijiworld News/MB): ದ.ಕ.ಜಿಲ್ಲೆಯಲ್ಲಿ ಮಾ.23ರಂದು ನಡೆಯುವ ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪರೀಕ್ಷೆಗೆ ಕೇರಳದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಮತ್ತು ಪರೀಕ್ಷೆಯ ಕರ್ತವ್ಯ ನಿರ್ವಹಿಸುವ ಉಪನ್ಯಾಸಕರು, ನಿಯೋಜಿತ ಸಿಬ್ಬಂದಿಗೆ ಅನುಕೂಲವಾಗುವಂತೆ ದ.ಕ.ಜಿಲ್ಲಾಡಳಿತ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿದೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಅಗತ್ಯ ಸಲಕರಣೆ, ಪ್ರವೇಶ ಪತ್ರದೊಂದಿಗೆ ಸೂಚಿಸಿದ ಸ್ಥಳದಲ್ಲಿ ನಿಗದಿ ಪಡಿಸಿದ ಸಮಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ತಿಳಿಸಿದೆ.
ಕೇರಳದ ವಿದ್ಯಾರ್ಥಿಗಳು ಇರುವ ಕಾಲೇಜಿನ ಪ್ರಾಂಶುಪಾಲರು ಓರ್ವ ಸಿಬ್ಬಂದಿಯನ್ನು ನಿಯೋಜಿಸಿ ವಿದ್ಯಾರ್ಥಿಗಳನ್ನು ಗುರುತಿಸಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ನಿರ್ದಿಷ್ಟ ಪರೀಕ್ಷಾ ಕೇಂದ್ರಗಳಿಗೆ ತಲುಪುವಂತೆ ಹಾಗೂ ಪರೀಕ್ಷೆ ಮುಗಿದ ಬಳಿಕ ನಿರ್ದಿಷ್ಟ ಬಸ್ಗಳಲ್ಲಿ ಅವರನ್ನು ತಲುಪಿಸುವ ಜವಾಬ್ದಾರಿ ವಹಿಸಲು ತಿಳಿಸಿದೆ.
ಉಪನ್ಯಾಸಕರು ಮತ್ತು ನಿಯೋಜಿತ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು. ಗಡಿಭಾಗದಲ್ಲಿ ವೈದ್ಯಕೀಯ ತಪಾಸಣೆ ನಡೆಯಲಿದ್ದು ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿಗಳು ಸಹಕರಿಸಬೇಕು. ಅದಕ್ಕಾಗಿ ಎಲ್ಲರೂ ಬೆಳಿಗ್ಗೆ 7 ರಿಂದ 8 ರ ಒಳಗೆ ಕಡ್ಡಾಯವಾಗಿ ನಿರ್ದಿಷ್ಟ ಸ್ಥಳದಲ್ಲಿ ಹಾಜರಿರಬೇಕು.
ಹಾಗೆಯೇ ಯಾವುದೇ ವಿದ್ಯಾರ್ಥಿಗಳನ್ನು ಅವರ ಪೋಷಕರು ನೇರವಾಗಿ ತಮ್ಮ ಸ್ವಂತ ವಾಹನದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಕರೆದುಕೊಂಡು ಬರುವಂತಿಲ್ಲ, ವಾಪಾಸ್ ಕರೆದುಕೊಮಡು ಹೋಗುವಂತಿಲ್ಲ.
ವಿದ್ಯಾರ್ಥಿ - ಉಪನ್ಯಾಸಕರು ಬಸ್ ವ್ಯವಸ್ಥೆ ಕಲ್ಪಿಸಲಾಗಿರುವ ಸ್ಥಳಗಳು
ಮಂಗಳೂರು ಗಡಿಭಾಗ - ತಲಪಾಡಿ ಟೋಲ್ ಗೇಟ್ (15 ಬಸ್ಗಳು)
ಮಂಗಳೂರು ಗಡಿಭಾಗ - ಮುಡಿಪು ಪುಣ್ಯಕೋಟಿ ನಗರ (1 ಬಸ್)
ವಿಟ್ಲ ಗಡಿಭಾಗ - ಬಾಯಾರು (1 ಬಸ್)
ವಿಟ್ಲ ಗಡಿಭಾಗ - ಸಾರಡ್ಕ (1 ಬಸ್)
ವಿಟ್ಲ ಗಡಿಭಾಗ - ಆನೆಕಲ್ಲು (1 ಬಸ್)
ಪುತ್ತೂರು ಗಡಿಭಾಗ - ಕಾಯರ್ಪದವು (1 ಬಸ್)
ಸುಳ್ಯ ಗಡಿಭಾಗ - ಕರಿಕೆ (1 ಬಸ್)
ಸುಳ್ಯ ಗಡಿಭಾಗ - ಪಂಜಿಕಲ್ಲು (1 ಬಸ್)