ಮಂಗಳೂರು, ಮಾ.22 (DaijiworldNews/PY) : ಕೊರೊನಾ ವೈರಸ್ ಭೀತಿ ಹಿನ್ನೆಲೆ ಮಂಗಳೂರು ಲಾಕ್ ಡೌನ್ ಪ್ರಯುಕ್ತ ಸೋಮವಾರ ನಡೆಯಬೇಕಿದ್ದ ಗೋಲಿಬಾರ್ ಕುರಿತ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಮಂಗಳೂರು ಗೋಲಿಬಾರ್ ಕುರಿತ ವಿಚಾರಣೆಯನ್ನು ಮಾ.23 ಸೋಮವಾರದಂದು ನಿಗದಿ ಪಡಿಸಲಾಗಿತ್ತು, ಆದರೆ, ನಾಳೆ ಮಂಗಳೂರು ಲಾಕ್ಡೌನ್ ಇರುವ ಕಾರಣ ಗೋಲಿಬಾರ್ ಕುರಿತ ವಿಚಾರಣೆಯನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.