ಮಂಗಳೂರು, ಮಾ.23 (Daijiworld News/MB) : ಮಂಗಳೂರಿನಲ್ಲೂ ಕೊರೊನಾ ವೈರಸ್ ದೃಡ ಪಟ್ಟ ಹಿನ್ನಲೆಯಲ್ಲಿ ನಗರದಲ್ಲಿ ನಿರ್ಬಂಧ ಇನ್ನಷ್ಟು ಹೆಚ್ಚಿಸಲಾಗಿದೆ. ರಾಜ್ಯದಲ್ಲಿ 9 ಜಿಲ್ಲೆಗಳು ಸಂಪೂರ್ಣ ಲಾಕ್ಡೌನ್ ಆಗಿದ್ದು ಆ ಪೈಕಿ ಮಂಗಳೂರು ಕೂಡಾ ಒಂದಾಗಿದೆ. ಆದರೆ ಮಂಗಳೂರಿನ ಮೀನು ಮಾರುಕಟ್ಟೆ, ಮಾಂಸ ಮಾರಟ ಎಂದಿನಂತೆ ನಡೆಯುತ್ತಿದೆ.
ಸಾಂದರ್ಭಿಕ ಚಿತ್ರ
ಜಿಲ್ಲಾಡಳಿತವು ಮೀನು ಮಾರುಕಟ್ಟೆ, ಮಾಂಸ ಮಾರಾಟಕ್ಕೆ ಅವಕಾಶ ನೀಡಿದ್ದು ಅವಕಾಶ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಆರಂಭವಾಗಿದೆ.
ತರಕಾರಿಗಳೂ ಕೂಡಾ ಲಭ್ಯವಾಗುತ್ತಿದೆ. ಆದರೆ ಮೀನು ಮಾರುಕಟ್ಟೆ, ಮಾಂಸದಂಗಡಿ, ತರಕಾರಿ ಅಂಗಡಿಗಳಿಗೆ ಕಡಿಮೆ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುತ್ತಿದ್ದಾರೆ.