ಮಂಗಳೂರು, ಮಾ.23 (Daijiworld News/MB) : ಕೊರೊನಾ ಭೀತಿ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಸೇರಿದಂತೆ ರಾಜ್ಯದ 9 ಜಿಲ್ಲೆಗಳು ಲಾಕ್ಡೌನ್ ಆಗಿದ್ದು ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಖಾಸಗೀ ಬಸ್ಗಳು ಕೂಡಾ ಸಂಚಾರ ಮಾಡದಂತೆ ತಿಳಿಸಲಾಗಿದೆ. ಆದರೆ ಇಂದು ಕೆಲವು ಖಾಸಗಿ ಬಸ್ಗಳು ಆದೇಶಕ್ಕೆ ಕ್ಯಾರೆ ಅನ್ನದೇ ಸಂಚಾರ ಮಾಡುತ್ತಿದೆ.
ಮಂಗಳೂರು-ಮೂಡಬಿದ್ರೆ ಎಕ್ಸ್ಪ್ರೆಸ್ ಬಸ್ ಮಂಗಳೂರಿನ ಖಾಸಗಿ ಬಸ್ ನಿಲ್ದಾಣದಿಂದ ಸಂಚಾರ ಆರಂಭಿಸಿದೆ.
ಮಂಗಳೂರಿನಲ್ಲಿ ಕೊರೊನಾ ವೈರಸ್ನ ಮೊದಲ ಪ್ರಕರಣ ಪತ್ತೆಯಾದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ಅವರು ಸರಕಾರದ ಆದೇಶದಂತೆ ಕೊರೊನಾ ವೈರಸ್ ಎದುರಿಸುವ ನಿಟ್ಟಿನಲ್ಲಿ ಮಾರ್ಚ್ 31 ರವರೆಗೆ ಖಾಸಗಿ ಬಸ್ಸುಗಳ ಸೇವೆ ಇರುವುದಿಲ್ಲ ಎಂದು ಭಾನುವಾರ ತಿಳಿಸಿದ್ದರು.