ಮಂಗಳೂರು, ಮಾ 23 (Daijiworld News/MSP): ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ದೃಢವಾದ ಹಿನ್ನಲೆಯಲ್ಲಿ ವೈರಸ್ ಹರಡುವುದನ್ನು ತಡೆಗಟ್ಟಲೆಂದು ಲಾಕ್ ಡೌನ್ ಆದೇಶಿಸಿದ್ದರೂ ಬೆಳ್ತಂಗಡಿ, ಧರ್ಮಸ್ಥಳ, ಗುರುವಾಯನೆಕೆರೆ, ಬಂಟ್ವಾಳ, ಸುರತ್ಕಲ್, ವೇಣೂರು ಮುಂತಾದೆಡೆ ಜನತೆ ಸೋಮವಾರ ತಮ್ಮ ಸಾಮಾನ್ಯ ಚಟುವಟಿಕೆಗೆ ಮರಳಲು ಯತ್ನಿಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಎಲ್ಲಾ ಅಂಗಡಿ ಮುಂಗಟ್ಟು ತೆರೆದಿದ್ದು, ಜನ ಎಂದಿನಂತೆ ಪೇಟೆಗಳಲ್ಲಿ ತುಂಬಿತುಳುಕಿದ್ದಾರೆ.
ಹೆದ್ದಾರಿಯಲ್ಲಿ ಕೆ.ಎಸ್. ಆರ್. ಟಿ ಸಿ ಬಸ್ ಹಾಗೂ ಖಾಸಗಿ ಬಸ್ ಹೊರತುಪಡಿಸಿ ಎಲ್ಲಾ ಖಾಸಗಿ ಬಸ್ ಹಾಗೂ ಬಾಡಿಗೆ ಕಾರುಗಳು ಓಡಾಟ, ಸಾಮಾನ್ಯವಾಗಿದೆ. ತರಕಾರಿ, ದಿನಸಿ ಸಾಮಾನು ಅಂಗಡಿಗಳಲ್ಲದೆ, ಚಿನ್ನದಂಗಡಿ, ಬಟ್ಟೆ ಬರೆ ಅಂಗಡಿಗಳು, ಮೊಬೈಲ್ ಶಾಪ್ ಮುಂತಾದವೂ ಆರಂಭಗೊಂಡಿವೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿದ್ದರು ಜನಸಾಮಾನ್ಯರು ಇದಕ್ಕೆ ತಲೆಕೆಡಿಸಿಕೊಂಡಂತೆ ಕಾಣಿಸಿಲ್ಲ. ಬಸ್ಸುಗಳಿಲ್ಲದೆ ರಿಕ್ಷಾ ಹಾಗೂ ಇನ್ನಿತರ ಬಾಡಿಗೆ ವಾಹನಗಳಲ್ಲಿ ಜನ ಗುಂಪು ಗುಂಪಾಗಿ ಹೋಗುತ್ತಿದ್ದು, ಕೊರೊನಾ ಮರಣ ಮೃದಂಗವನ್ನು ನೋಡಿಯಾದರೂ ಜನ ಇನ್ನಾದರೂ ಎಚ್ಚೆತ್ತುಕೊಳ್ಳುವುದು ಸೂಕ್ತ.