ಕಾಸರಗೋಡು, ಮಾ 23 (DaijiworldNews/SM): ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ರವರಿಗೆ ಕೊರೋನಾ ಸೋಂಕು ಲಕ್ಷಣ ಇಲ್ಲ ಎಂಬುವುದು ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ದೃಢಪಟ್ಟಿದೆ. ಸೋಮವಾರ ಪರೀಕ್ಷಾ ವರದಿ ಬಂದಿದ್ದು ನೆಗಟಿವ್ ವರದಿಯಾಗಿದೆ.
ಕಾಸರಗೋಡಿನಲ್ಲಿ ಕೊರೋನಾ ಸೋಂಕು ಪತ್ತೆಯಾದ ಮೂರನೇ ವ್ಯಕ್ತಿ ಶಾಸಕರನ್ನು ಸಂಪರ್ಕಿಸಿದ್ದ. ಮದುವೆ ಸಮಾರಂಭವೊಂದರಲ್ಲಿ ಶಾಸಕರನ್ನು ಭೇಟಿ ಮಾಡಿದ್ದ. ಇದರಿಂದ ಶಾಸಕ ನೆಲ್ಲಿಕುನ್ನು ಮನೆಯಲ್ಲೇ ಸ್ವನಿಗಾ ದಲ್ಲಿದ್ದಾರೆ.
ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ರನ್ನು ಈ ಸೋಂಕಿತ ವ್ಯಕ್ತಿ ಸಂಪರ್ಕಿಸಿದ್ದು, ಖಮರುದ್ದೀನ್ ರವರ ವೈದ್ಯಕೀಯ ಪರೀಕ್ಷಾ ವರದಿ ನಿರೀಕ್ಷಿಸಲಾಗುತ್ತಿದೆ. ಖಮರುದ್ದೀನ್ ಸ್ವ ಇಚ್ಛೆಯಿಂದ ಮನೆಯಲ್ಲೇ ನಿಗಾದಲ್ಲಿದ್ದಾರೆ.