ಕುಂದಾಪುರ, ಮಾ 23 (DaijiworldNews/SM): ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹಾಗೂ ಸೆಕ್ಷನ್ ಜಾರಿಯ ನಡುವೆಯೇ ಕರಾವಳಿಯಾದ್ಯಂತ ಖರೀದಿ ಜೋರಾಗಿದ್ರೆ, ಕುಂದಾಪುರದಲ್ಲಿ ಮಾತ್ರ ಯಾವುದೇ ಆತಂಕಕ್ಕೆ ಒಳಗಾಗದೆ ಮದ್ಯ ಖರೀದಿಗೆ ಮುಗಿಬಿದ್ದಿದ್ದಾರೆ. ಸಂತೆ, ದಿನಸಿ ಖರೀದಿಯ ಜೊತೆಯಲ್ಲೇ ಮದ್ಯ ಪ್ರಿಯರು ಮಾತ್ರ ಯಾವುದೇ ಚಿಂತೆ ಇಲ್ಲದೆ ಮದ್ಯ ಖರೀದಿಗೆ ಮುಂದಾಗಿರುವುದು ನಾಗರಿಕ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ.
ಸೆಕ್ಷನ್ ಜಾರಿಯಿದ್ದರೂ ಕೂಡ ಅದನ್ನು ಉಲ್ಲಂಘಿಸಲಾಗಿದೆ. ಕೇವಲ ಅಗತ್ಯ ಸಾಮಾಗ್ರಿಗಳನ್ನಷ್ಟೇ ಖರೀಧಿಸುವ ನಿಟ್ಟಿನಲ್ಲಿ ಅವಕಾಶಗಳನ್ನು ಕಲ್ಪಿಸಲಾಗಿದೆ. ಹಾಗೂ ಅಗತ್ಯ ವಸ್ತುಗಳಾದ ದಿನಸಿ, ತರಕಾರಿ, ಹಾಲು ಮಾರಾಟದ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಕುಂದಾಪುರದಲ್ಲಿ ಮಾತ್ರ ವೈನ್ ಶಾಪ್ ಕೂಡ ತೆರೆಯಲಾಗಿದೆ. ಇದರಿಂದಾಗಿ ಮದ್ಯಪ್ರಿಯರು ಖುಷಿಯಿಂದಲೇ ತಮ್ಮಿಷ್ಟದ ಮದ್ಯ ಖರೀದಿಗೆ ಮುಗಿಬೀಳುತ್ತಿದ್ದ ದೃಶ್ಯ ಇವತ್ತು ಕಂಡುಬಂದಿದೆ. ಹಾಗೂ ಮದ್ಯದಂಗಡಿಯಲ್ಲಿ ನೂಕುನುಗ್ಗಲು ಉಂಟಾದ ಘಟನೆ ಕೂಡ ನಡೆದಿದೆ.
ಇನ್ನು ತಾಲೂಕಿನಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮವಿಲ್ಲದೇ ಖರೀದಿ ಮಾಡಲಾಗಿದೆ. ನಿಷೇಧಾಜ್ಞೆಯ ನಡುವೆಯೇ ಸಾರ್ವಜನಿಕರು ಖರೀದಿಗೆ ಮುಗಿಬಿಳುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.