ಮಂಗಳೂರು, ಮಾ 23 (DaijiworldNews/SM): ದ.ಕ. ಜಿಲ್ಲೆಯಲ್ಲಿ ಈಗಾಗಲೇ ಒಂದು ಕೊರೊನಾ ಪ್ರಕರಣ ಪತ್ತೆಯಾದ ಬಳಿಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಇಂದಿನಿಂದ ಇದನ್ನು ಮತ್ತಷ್ಟು ಬಿಗುಗೊಳಿಸಲಾಗಿದೆ. ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟಕಷ್ಟೇ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಎಲ್ಲಾ ಸೇವೆಗಳಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ನೂತನ ಆದೇಶ ಹೊರಡಿಸಿದ್ದಾರೆ.
ನೂತನ ಆದೇಶದಲ್ಲಿ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ಅವಶ್ಯಕ ಸಾಮಾಗ್ರಿಗಳ ಅಂಗಡಿ ಮುಂಗಟ್ಟು ತೆರೆದಿರಲಿವೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿ ತೆರಳದಂತೆ ಎಚ್ಚರವಾಗಿದ್ದುಕೊಂಡು ತಮ್ಮ ಅಗತ್ಯ ವಸ್ತುಗಳ ಖರಿದಿಸುವಂತೆ ಆದೇಶ ನೀಡಲಾಗಿದೆ. ಯಾವುದೇ ಕಾರಣಕ್ಕೂ ಜನತೆ ಆತಂಕಗೊಂಡು ಅಗತ್ಯ ಸಾಮಾಗ್ರಿಗಳ ಖರೀದಿಗೆ ಮುಗಿಬೀಳುವ ಅವಶ್ಯಕತೆ ಇಲ್ಲ.
ಜಿಲ್ಲೆಯಲ್ಲಿ ಏನೇನು ಸೇವೆ ಲಭ್ಯ?
ಪದಿತರ ಅಂಗಡಿ
ಹಾಲು, ತರಕಾರಿ, ದಿನಸಿ
ಮಾಂಸ, ಮೀನು
ಹಣ್ಣಿನ ಮಾರುಕಟ್ಟೆ
ಸಗಟು, ಚಿಲ್ಲರೆ ವ್ಯಾಪಾರದ ಅಂಗಡಿಗಳು
ತುರ್ತು ಸಾಗಾಟಕ್ಕೆ ಮಾತ್ರ ಬಾಡಿಗೆ ವಾಹನಗಳು
ಬೆಳಗ್ಗೆ 6ರಿಂದ ಮಧ್ಯಾಹ್ನ 12ರ ತನಕವಷ್ಟೇ ತೆರೆದಿರುತ್ತವೆ.
ವೈದ್ಯಕೀಯ ಉಪಕರಣಗಳು, ಔಷಧ
ಹೋಟೆಲ್ ನಿಂದ ಪಾರ್ಸೆಲ್ ಮಾತ್ರ
ಕೃಷಿ ಉತ್ಪನ್ನಗಳ ಕಾರ್ಖಾನೆ
ಮಂಗಳವಾರದಿಂದ ಜಿಲ್ಲೆಯಲ್ಲಿ ಏನೇನಿರಲ್ಲ?
ಓಲಾ, ಉಬೇರ್, ಟ್ಯಾಕ್ಸಿ, ಆಟೋ, ಬಾಡಿಗೆ ವಾಹನಗಳು
ಕೈಗಾರಿಕೆ, ಕಾರ್ಖಾನೆಗಳ ಕಾರ್ಯಾಚರಣೆ ಸ್ಥಗಿತ
ಸಿನಿಮಾ ಮಂದಿರ
ಶಾಪಿಂಗ್ ಮಾಲ್ ಗಳು
ಖಾಸಗಿ, ಸರಕಾರಿ ಬಸ್ ಗಳ ಸಂಚಾರ ಇಲ್ಲ
ಮದ್ಯ ಮಾರಾಟ, ಹೋಟೇಲ್ ಗಳು ಬಂದ್