ಮಂಗಳೂರು, ಮಾ.24 (Daijiworld News/MB) : ಕೊರೊನಾ ಭೀತಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯವೇ ಲಾಕ್ಡೌನ್ ಆಗಿದ್ದು ಈ ಸಂದರ್ಭದಲ್ಲಿ ಮಂಗಳೂರಿನಲ್ಲಿ ಯಾವುದೇ ಸಾಮಾಜಿಕ ಅಂತರವಿಲ್ಲದೆ ನೂರಾರು ಜನರು ಸೆಂಟ್ರಲ್ ಮಾರ್ಕೇಟ್ನಲ್ಲಿ ಜಮಾಯಿಸಿದ್ದಾರೆ.
ಇನ್ನು ಕಲ್ಪನಾ ಬೇಕರಿಯಿಂದ ಅರ್ಧ ಶಟರ್ ಹಾಕಿ ತಿಂಡಿ ತಿನಿಸುಗಳ ಉಚಿತ ವಿತರಣೆ
ಮಾಡಲಾಗುತ್ತಿದ್ದು ಹೆಚ್ಚಿನ ಜನರು ಯಾವುದೇ ಮಾಸ್ಕ್ ಧರಿಸದಯೇ ತಿಂಡಿ ಪಡೆಯುತ್ತಿದ್ದಾರೆ.
ಮಾರ್ಕೇಟ್ನಲ್ಲಂತೂ ಜನರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು ಹತ್ತಾರು ಜನರು ಯಾವುದೇ ಮಾಸ್ಕ್ ಧರಿಸದೆಯೇ ಒಟ್ಟಿಗೆ ಸೇರಿ ಖರೀದಿ ಮಾಡುತ್ತಿದ್ದು ಸಾಮಾಜಿಕ ಜವಾಬ್ದಾರಿಯನ್ನೇ ಮರೆತಿದ್ದಾರೆ.
ಜಿಲ್ಲಾಡಳಿತದ ಲಾಕ್ ಡೌನ್ ಆದೇಶಕ್ಕೆ ಯಾವುದೇ ಬೆಲೆ ಇಲ್ಲಾದಂತೆ ಆಗಿದ್ದು ಮಾರ್ಕೇಟ್ಗಳಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಹಣ್ಣು, ತರಕಾರಿ, ಖರೀದಿ ಮಾಡುತ್ತಿದ್ದಾರೆ.