ಮಂಗಳೂರು, ಮಾ. 24 (Daijiworld News/MSP) : ಮಾರಕ ಕೊರೊನಾ ಸೋಂಕು ದೇಶ ವ್ಯಾಪ್ತಿ ಆತಂಕ ಸೃಷ್ಟಿಸಿದೆ. ಮಾರಕ ಸೋಂಕು ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಇಂದಿನಿಂದ ಮಾ.31ರವರೆಗೆ ಸಂಪೂರ್ಣ ಕರ್ನಾಟಕ ಲಾಕ್ ಡೌನ್ ಗೆ ಸರ್ಕಾರ ಆದೇಶ ನೀಡಿದೆ. ಈ ನಡುವೆ ಮಂಗಳೂರಿನಲ್ಲಿ ಆದೇಶ ಉಲ್ಲಂಘಿಸಿದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾಧಿಕಾರಿಯವರು ಜಿಲ್ಲೆಯಲ್ಲಿ ವಿಧಿಸಿದ್ದ ಸಿಆರ್ಪಿಸಿ ಸೆಕ್ಷನ್ 144ನ್ನು ಉಲ್ಲಂಘಿಸಿ ತೆರಳಿದ್ದ ಉಳ್ಳಾಲದ ಇನ್ ಲ್ಯಾಂಡ್ ಇನ್ಫಲಾ ನಿವಾಸಿ ಸಿದ್ಧಿಕ್, ತೊಕ್ಕೊಟ್ಟು ನಿವಾಸಿ ವಿನಯ್, ಹಾಸನದ ದಿನ್ನೆಕೊಪ್ಪಲುವಿನ ಜಮಿಸ್ (45) ತರಿಕೇರಿಯ ವಿಮೇಶ್(30) ಉತ್ತರ ಪ್ರದೇಶದ ಪ್ರಸ್ತುತ ಕುದ್ರೋಳಿಯಲ್ಲಿ ನೆಲೆಸಿರುವ ಅಮೀರ್ ಹಾಜಿ ಅನ್ಸರಿ, ರಾಜಸ್ತಾನ ಮೂಲದ ಪ್ರಸ್ತುತ ಕುದ್ರೋಳಿಯಲ್ಲಿ ನೆಲೆಸಿರುವ ಬಾಲರಾಮ್ ಚೌಧರಿ(32) ಅಸ್ಸಾಂ ಮೂಲದ ಪ್ರಸ್ತುತ ಬಂದರು ಅಜಾಧಿ ಸ್ಟೀಲ್ ನ ರಾಹುಲ್ ಪಾಂಡೆ(18) ಯನ್ನು ಬಂಧಿಸಿಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
"ಮಂಗಳೂರು ನಗರದ ಸಂಪೂರ್ಣವಾಗಿ 'ಲಾಕ್ ಡೌನ್' ನಲ್ಲಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಮೊಕದ್ದಮೆ ದಾಖಲಿಸಿ, ಬಂಧಿಸಲಾಗುವುದು. ಈ ಹಿನ್ನಲೆಯಲ್ಲಿ ಜನ್ತೆ ಮನೆಯಲ್ಲೇ ಉಳಿದು ಸಹಕಾರ ನೀಡಬೇಕು" ಎಂದು ಕಮಿಷನರ್ ಹೇಳಿದ್ದಾರೆ.