ಮಂಗಳೂರು, ಮಾ. 24 (Daijiworld News/MSP) : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿದೆ. ಮಾರ್ಚ್ 20 ರಲ್ಲಿ ಬಂದ ಸ್ಪೈಸ್ ಜೆಟ್ ವಿಮಾನದಲ್ಲಿ ಮೊದಲ ಪ್ರಕರಣದ ಭಟ್ಕಳ ಮೂಲದ ವ್ಯಕ್ತಿ ಜೊತೆ ಬಂದಿದ್ದ ಮೂವರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದಲ್ಲದೆ ಮಾರ್ಚ್ 19 ಕ್ಕೆ ಬಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಬಂದಿದ್ದ ಒರ್ವನಿಗೂ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಶಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಪ್ರತಿಯೊಬ್ಬರೂ ಹೆಚ್ಚು ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕಾಗಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದ್ದು ಹೋಮ್ ಐಸೋಲೇಷನ್ನಲ್ಲಿ ಇರುವರಿಗಾಗಿ ಆಪ್ ಒಂದನ್ನು ಸಿದ್ದಪಡಿಸಿದೆ. ಯಾರಿಗೆಲ್ಲಾ ಹೋಮ್ ಕ್ವಾರಂಟೈನ್ನಲ್ಲಿರುವ ಪ್ರತಿಯೊಬ್ಬರು ಈ ಆಪ್ ನ್ನು ಕಡ್ದಾಯವಾಗಿ ಆಳವಡಿಸಿಕೊಳ್ಳಲು ಸೂಚಿಸಲಾಗಿದೆ.
ಈ ಆಪ್ ಮೂಲಕ ಹೋಮ್ ಕ್ವಾರಂಟೈನ್ನಲ್ಲಿರುವರಿಗೆ ಜಿಲ್ಲಾಡಳಿತದಿಂದ ನೇರವಾಗಿ ಸಂದೇಶಗಳು ದೊರಕಲಿದೆ. ಮಾತ್ರವಲ್ಲದೇ ಈ ಆಪ್ ನಲ್ಲಿ ತಮ್ಮ ಆರೋಗ್ಯದ ಕುರಿತ ಸ್ಟೇಟಸ್ ಗಳನ್ನು ಆಪ್ ಡೇಟ್ ಮಾಡಬೇಕಾಗುತ್ತದೆ.
ಆಪ್ ಲಿಂಕ್ ಇಲ್ಲಿದೆ:
https://dk.nic.in/en/covid-19/