ಮಂಗಳೂರು, ಮಾ 24 (DaijiworldNews/SM): ದೇಶದೆಲ್ಲೆಡೆ ಲಾಕ್ ಡೌನ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಆದೇಶ ನೀಡಿರುವ ಬೆನ್ನಲ್ಲೇ ಜನರಲ್ಲಿರುವ ಏಕೈಕ ಗೊಂದಲ ಅಗತ್ಯ ವಸ್ತು ಖರೀಧಿಸುವ ವಿಚಾರವಾಗಿತ್ತು. ಆದರೆ, ಇದೀಗ ಅದಕ್ಕೂ ತೆರೆ ಬಿದ್ದಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮಂಗಳೂರು ಕಮಿಷರ್ ಟ್ವೀಟ್ ಮೂಲಕ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 12ಗಂಟೆಯವರೆಗೆ ಅಗತ್ಯ ವಸ್ತುಗಳು ಸಾರ್ವಜನಿಕರಿಗೆ ಲಭ್ಯವಿರಲಿದೆ ಎಂಬುವುದಾಗಿ ಮಂಗಳೂರು ಪೊಲೀಸ್ ಕಮೀಷನರ್ ಡಾ. ಪಿ.ಎಸ್. ಹರ್ಷಾ ಟ್ವೀಟ್ ಮಾಡಿದ್ದಾರೆ. ದ.ಕ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಅಗತ್ಯ ಸಾಮಾಗ್ರಿಗೆ ಸಮಸ್ಯೆಯಾಗಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜನರು ಗೊಂದಲಗೊಳ್ಳುವ ಅಗತ್ಯತೆ ಇಲ್ಲ ಎಂಬುವುದಾಗಿ ಟ್ವೀಟ್ ಮಾಡಿದ್ದಾರೆ. ಇನ್ನು ಯಾವುದೇ ಕಾರಣಕ್ಕೂ ಜನತೆ ಗುಂಪು ಗುಂಪಾಗಿ ತೆರಳದೆ, ಅಗತ್ಯ ವಸ್ತುಗಳನ್ನು ಖರೀದಿಸಲು ತೆರಳಬೇಕೆಂದು ಮನವಿ ಮಾಡಲಾಗಿದೆ.
ಅಗತ್ಯ ವಸ್ತುಗಳ ಪೂರೈಕೆ ಲಭ್ಯವಿರುತ್ತದೆ-ಮೋದಿ ಟ್ವೀಟ್:
ಇನ್ನು ಎಂದಿನಂತೆ ಅಗತ್ಯ ವಸ್ತುಗಳ ಪೂರೈಕೆ ಇರಲಿದೆ. ವೈದ್ಯಕೀಯ ಸೇವೆ, ದಿನಸಿ ಅಂಗಡಿಗಳು ತೆರೆದಿರಲಿದೆ. ಪೊಲೀಸ್, ಜಿಲ್ಲಾಧಿಕಾರಿ ಕಚೇರಿ ತೆರೆದಿರಲಿದೆ. ಭಾರತದ ಜನರು ಆತಂಕ ಪಡುವ ಅಗತ್ಯವಿಲ್ಲ ಎಂಬುವುದಾಗಿ ಭಾರತ ಲಾಕ್ ಡೌನ್ ಆದೇಶದ ಬಳಿಕ ಪ್ರಧಾನಿ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.