ಮಂಗಳೂರು, ಮಾ 24 (DaijiworldNews/SM): ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆ ಮನೆಯೊಳಗೆ ಇರುವಂತೆ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಕಮಿಷನರ್ ಪಿ.ಎಸ್. ಹರ್ಷಾ ಕೂಡ ಮನವಿ ಮಾಡಿಕೊಂಡಿದ್ದಾರೆ.
ಮನೆಯಲ್ಲೇ ಇರಿ... ಮನೆಯಲ್ಲೇ ಇರಿ ಎಂಬುವುದಾಗಿ ಅವರು ಟ್ವೀಟ್ ಮಾಡಿದ್ದಾರೆ. ‘ಸ್ಟೇ ಹೋಮ್... ಸ್ಟೇ ಹೋಮ್’ ಎಂಬುವುದಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಆಮೂಲಕ ಮಂಗಳೂರು ಜನತೆಯಲ್ಲಿ ಮನವಿ ಮಾಡಿಕೊಳ್ಳುವುದರ ಜತೆಗೆ, ಕೊರೊನಾ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಿದ್ದಾರೆ.
ಪ್ರಧಾನಿ ಮೋದಿ ತಿಳಿಸಿರುವ ಪ್ರಕಾರ ಕೊರೊನಾ ನಿಯಂತ್ರಣಕ್ಕೆ ಇರುವ ಏಕೈಕ ಉಪಾಯವೇ ಮನೆಯಲ್ಲಿರುವುದು. ಇದನ್ನು ಪ್ರತಿಯೊಬ್ಬರು ಪಾಲಿಸಬೇಕು. ಅತೀ ಅವಶ್ಯಕವೆನಿಸಿದ್ದಲ್ಲಿ ಮಾತ್ರವೇ ಒಬ್ಬರು ಮಾತ್ರ ತೆರಳಿ ದಿನಸಿ ಸಾಮಾಗ್ರಿಗಳನ್ನು ಖರೀಧಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಈ ನಡುವೆ ಜನತೆ ತಮ್ಮ ನಿರ್ಣಾಯಕ ಪಾತ್ರವಹಿಸಬೇಕಾಗಿದೆ. ಅಗತ್ಯ ವಸ್ತುಗಳ ಖರಿದಿಸಲು ಮನೆಯಿಂದ ಹೊರಗೆ ಬಂದಲ್ಲಿ ಹಲವಾರು ದಿನಗಳಿಗೆ ಬೇಕಾಗುವಷ್ಟು ಸಾಮಾಗ್ರಿಗಳ ಖರೀದಿಸಿ ತೆರಳಬೇಕಾಗಿದೆ. ಇದರಿಂದಾಗಿ ಅನವಶ್ಯಕವಾಗಿ ಮನೆಯಿಂದ ಹೊರಗೆ ಬರುವುದು ತಪ್ಪುತ್ತದೆ. ಇದರಿಂದಾಗಿ ಸೋಂಕು ನಿಯಂತ್ರಣಕ್ಕೆ ನಮ್ಮಿಂದಾದ ಕೊಡುಗೆ ನೀಡಲು ಸಾಧ್ಯವಿದೆ.