ಮಂಗಳೂರು, ಮಾ.25 (Daijiworld News/MB) : ಭಾರತವೇ 21 ದಿನಗಳ ಕಾಲ ಲಾಕ್ಡೌನ್ ಮಾಡಿ ಪ್ರಧಾನಿ ಮೋದಿ ಆದೇಶಿಸಿದ್ದು ನಗರದ ಮಾರುಕಟ್ಟೆಯಲ್ಲಿ ಮಾತ್ರ ಇನ್ನೂ ಜನರು ಕಡಿಮೆಯಾಗಿಲ್ಲ.
ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿ ಮಂಗಳವಾರ ಹೆಚ್ಚು ಜನರು ಸೇರಿದ್ದು ಬುಧವಾರ ಕೂಡಾ ಹೆಚ್ಚು ಮಾರುಕಟ್ಟೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಜನರಿದ್ದು ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ.
ಇಷ್ಟೆಲ್ಲಾ ಜನರು ಸೇರಿದ್ದರೂ ಕೂಡಾ ಕೇವಲ ಬೆರಳೆಣಿಕೆ ಮಂದಿಯ ಮುಖದಲ್ಲಿ ಮಾತ್ರ ಮಾಸ್ಕ್ ಕಾಣಿಸುತ್ತಿದೆ.
ಮಂಗಳವಾರ ಜನರು ಮಾಸ್ಕ್ ಹಾಕದೆಯೇ ವ್ಯಾಪಾರ ವಹಿವಾಟು ಮಾಡಿದ್ದು ಇಂದು ಕೂಡಾ ಯಾವುದೇ ಸುರಕ್ಷತೆ ಇಲ್ಲದೇ ನೂರಾರು ಜನರು ವ್ಯಾಪಾರ ಮಾಡುತ್ತಿದ್ದಾರೆ.
ಲಾರಿಗಳಲ್ಲಿ ಸೆಂಟ್ರಲ್ ಮಾರುಕಟ್ಟೆಗೆ ತರಕಾರಿಗಳು ಬಂದಿದ್ದು ಜಿಲ್ಲೆಯ ಬೇರೆ ಬೇರೆ ಮಾರುಕಟ್ಟೆಗಳಿಗೆ ತರಕಾರಿ ರವಾನೆ ಮಾಡಲಾಗುತ್ತಿದೆ.