ಮಂಗಳೂರು, ಮಾ.25 (Daijiworld News/MB) : ಕೊರೊನಾ ಭೀತಿಯಿಂದಾಗಿ ಭಾರತವೇ ಇನ್ನು 21 ದಿನಗಳ ಕಾಲ ಲಾಕ್ಡೌನ್ ಮಾಡಲಾಗಿದ್ದು ನಗರದ ಸೆಂಟ್ರಲ್ ಮಾರ್ಕೇಟ್ ಬಳಿ ಅಂಗಡಿಯಲ್ಲಿ ದಿನಸಿ ಖರೀದಿಗೆ ಜನರು ಮುಗಿ ಬಿದಿದ್ದು ಅಧಿಕಾರಿಗಳು ಲಾಠಿ ಹಿಡಿದು ಅಂಗಡಿ ಬಂದ್ ಮಾಡಿ ಎಂದು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಮುಂಜಾನೆ 6 ರಿಂದ 12 ಗಂಟೆಯವರೆಗೆ ಖರೀದಿಗೆ ಅವಕಾಶ ನೀಡಲಾಗಿದ್ದು ಜನರು ಮುಂಜಾನೆಯಿಂದಲ್ಲೇ ಅಂಗಡಿಗಳ ಮುಂದೆ ಸೇರಿದ್ದು ಇದರಿಂದಾಗಿ ಮಂಗಳೂರು ಪಾಲಿಕೆ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅಂಗಡಿಯನ್ನೇ ಬಂದ್ ಮಾಡಿಸಿದ್ದಾರೆ.
ಇನ್ನು ಮುಂಜಾನೆಯೇ ನಗರದ ಹಲವು ಭಾಗಗಳಲ್ಲಿ ಅಂಗಡಿಗಳನ್ನು ತರೆಯಲಾಗಿದ್ದು ಜನರು ದಿನಸಿ ಖರೀದಿಗಾಗಿ ಸಾಲು ನಿಂತು ಕಾಯುತ್ತಿದ್ದು ಹೆಚ್ಚಿನ ಜನರು ಒಮ್ಮೆಲೇ ಸೇರಿದ ಕಾರಣದಿಂದಾಗಿ ನಗರದ ಹಲವು ಅಂಗಡಿಗಳನ್ನು ಬಂದ್ ಮಾಡಲಾಗಿದೆ.