ಮಂಗಳೂರು, ಮಾ.25 (Daijiworld News/MSP) : ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೆನ್ಲಾಕ್ ಆಸ್ಪತ್ರೆಯ ವಿಚಾರದ ಕುರಿತು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡಿದೆ. ಡಾ. ರಾಮಚಂದ್ರ ಬಯಾರಿ ಅವರನ್ನು ಜಿಲ್ಲಾ ಆರೋಗ್ಯಾಧಿಕಾರಿಯಾಗಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
‘ಕೋವಿಡ್–19 ದೃಢಪಟ್ಟಿರುವ ವ್ಯಕ್ತಿಗಳನ್ನು ಕಟ್ಟುನಿಟ್ಟಾಗಿ ಚಿಕಿತ್ಸೆಗೆ ಒಳಪಡಿಸಲಾಗುವುದು. ಸಂಸದ ನಳಿನ್ಕುಮಾರ್ ಕಟೀಲ್ , ಜಿಲ್ಲಾಧಿಕಾರಿ, ಅವರು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಅಧಿವೇಶನ ಮುಗಿದ ತಕ್ಷಣ ಜಿಲ್ಲೆಯ ಶಾಸಕರೊಂದಿಗೆ ಕಾರ್ಯಪ್ರವೃತ್ತನಾಗುತ್ತೇನೆ. ಸಾರ್ವಜನಿಕರು ಆತಂಕ ಪಡಬಾರದು’ ಎಂದು ಮನವಿಮಾಡಿದ್ದಾರೆ.