ಪುತ್ತೂರು, ಫೆ 24: ಕಾನೂನು ವಿದ್ಯಾರ್ಥಿ ಅಮಿತ್ ಶಾ ವಿರುದ್ಧ ವ್ಯಂಗ್ಯದ ಪೋಸ್ಟ್ ಹಾಕಿದ್ದಕ್ಕೆ ಕಾಲೇಜಿನಿಂದಲೇ ಒಂದು ವಾರದ ಕಾಲ ಅಮಾನತು ಮಾಡಿರುವ ಘಟನೆ ನಡೆದಿದೆ.
ಪುತ್ತೂರಿನ ವಿವೇಕಾನಂದ ಕಾಲೇಜಿನ ಜಾಸ್ಟಿನ್ ಅಮಾನತುಗೊಂಡಿರುವ ವಿದ್ಯಾರ್ಥಿ. ಅಮಿತ್ ಶಾ ಬಂಡಲ್ ರಾಜಾ ಎಂದು ಇನ್ಸ್ಟಾಗ್ರಾಂ ನಲ್ಲಿ ಪ್ರಕಟಿಸಿದ್ದಕ್ಕೆ ಸಿಟ್ಟಾದ ಕಾಲೇಜು ಆಡಳಿತ ಮಂಡಳಿ ಆತನನ್ನು ಒಂದು ವಾರಗಳ ಕಾಲ ಅಮಾನತು ಮಾಡಿ ಆದೇಶ ನೀಡಿದೆ.
ಅಮಿತ್ ಶಾ ಕರಾವಳಿ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು, ಕಾಲೇಜಿನಿಂದ ಅಮಾನತ್ತಾಗಿರುವ ಜಾಸ್ಟಿನ್ ಕೂಡಾ ಸಂವಾದದಲ್ಲಿ ಭಾಗವಹಿಸಿದ್ದು, ತನ್ನ ಮೊಬೈಲ್ನಲ್ಲಿ ಚಿತ್ರವೊಂದನ್ನು ತೆಗೆದುಕೊಂಡು ಅದನ್ನು ಇನ್ಸ್ಟಾಗ್ರಾಂ ನಲ್ಲಿ ಪ್ರಕಟಿಸಿ ಅಮಿತ್ ಶಾ ಬಂಡಲ್ ರಾಜಾ ಎಂದು ಬರೆದುಕೊಂಡಿದ್ದರು.
ಸಾಮಾಜಿಕ ಜಾಲತಾಣದ ಪೋಸ್ಟ್ಗೆ ತರಗತಿಯಿಂದಲೇ ಅಮಾನತು ಮಾಡಿರುವ ಶಿಕ್ಷೆ ವಿಧಿಸಿರುವುದಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ.