ಮಂಗಳೂರು, ಮಾ.25 (Daijiworld News/MB) : ಕೊರೊನಾ ಹಬ್ಬುತ್ತಿರುವ ಕಾರಣದಿಂದಾಗಿ ದೇಶದಾದ್ಯಂತ ಲಾಕ್ಡೌನ್ ಮಾಡಲಾಗಿದ್ದು ಜನರು ಹೊರಬರುವುದಕ್ಕೆ ನಿರ್ಬಂಧ ಹೇರಲಾಗಿದೆ. ಈ ನಡುವೆ ಅನಗತ್ಯವಾಗಿ ಮನೆ ಹೊರಗೆ ತಿರುಗಾಟ ನಡೆಸಿತ್ತಿದ್ದರಿಗೆ ಉಪವಿಭಾಗಾಧಿಕಾರಿಯಿಂದ ಲಾಠಿ ಏಟು ಬಿದ್ದಿದೆ.
ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್ ಅವರು ತಿರುಗಾಟ ಎಲ್ಲಾ ಪ್ರದೇಶಗಳಿಗೆ ತೆರಳಿ ಜನರು ರಸ್ತೆಯಲ್ಲಿ ಓಡಾಟ ನಡೆಸದಂತೆ ನೋಡುತ್ತಿದ್ದು ಈ ಸಂದರ್ಭದಲ್ಲಿ ಬೈಕ್ನಲ್ಲಿ ಹೊರಗೆ ತಿರುಗಾಟ ನಡೆಸುತ್ತಿದ್ದವರಿಗೆ ಅವರು ಲಾಠಿ ಬೀಸಿದ್ದಾರೆ.
ಲಾಠಿ ಹಿಡಿದು ವಾರ್ನಿಂಗ್ ನೀಡುತ್ತಿರುವ ಅವರು ಅಂಗಡಿ ಮುಂಗಟ್ಟು ತೆರೆದಿದ್ದವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.