ಸುಳ್ಯ, ಮಾ.25 (Daijiworld News/MB) : ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅಂತರ್ ರಾಜ್ಯ ಸಂಪರ್ಕವನ್ನು ನಿಷೇಧಿಸಿದ್ದರೂ ಕೇರಳಕ್ಕೆ ಖಾಸಗಿ ವಾಹನದಲ್ಲಿ ಹಲವಾರು ಜನರು ಸಂಚಾರ ಮಾಡುತ್ತಿದ್ದರು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಗಡಿ ಭಾಗಗಳಲ್ಲಿ ಮಣ್ಣು ಹಾಕಿ ರಸ್ತೆ ಮುಚ್ಚಲಾಗಿದೆ.
ಅಂತರ್ ರಾಜ್ಯ ಸಂಪರ್ಕವಿರುವ ಮಂಡೆಕೋಲಿನ ಕನ್ಯಾನ ಹಾಗೂ ಮುರೂರಿನಲ್ಲಿ ಬಾರಿಕೇಡ್ ಇಟ್ಟು ಪೊಲೀಸರು ಸಂಚಾರ ತಡೆದಿದ್ದರೂ ಬಾರಿಕೇಡ್ ತೆಗೆದು ಕೇರಳಕ್ಕೆ ಹೋಗುತ್ತಿದ್ದರು.
ಅಂತರ್ ರಾಜ್ಯ ಸಂಚಾರ ಮಾಡಬಾರದು ಎಂದು ಆದೇಶ ಇದ್ದರೂ ಸಂಚಾರ ಮಾಡುತ್ತಿದ್ದ ಕಾರಣದಿಂದಾಗಿ ದೂರುಗಳು ಬಂದಿದ್ದು ಈ ಹಿನ್ನಲೆಯಲ್ಲಿ ಗ್ರಾ.ಪಂ. ಪಿ.ಡಿ.ಒ. ರವರು ಕನ್ಯಾನ ಹಾಗೂ ಮರೂರಿನಲ್ಲಿ ರಸ್ತೆಗೆ ಮಣ್ಣು ಹಾಕಿ ವಾಹನ ಸಂಚಾರಕ್ಕೆ ಕಡಿವಾಣ ಹಾಕಿದ್ದಾರೆ.
ಇನ್ನು ಪಾತೂರಿನಲ್ಲಿಯೂ ಇದೇ ರೀತಿಯಾಗಿ ಮಣ್ಣು ಹಾಕಿ ಸಂಚಾರ ಬಂದ್ ಮಾಡಲಾಗಿದೆ.