ಕುಂದಾಪುರ, ಮಾ 25 (DaijiworldNews/SM): ದೇಶದಲ್ಲೇ ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಅಸ್ತ್ರ ಪ್ರಯೋಗ ಮಾಡಲಾಗಿದೆ. ಇದನ್ನು ಉಡುಪಿ ಜಿಲ್ಲೆಯಲ್ಲಿ ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿದೆ. ಕುಂದಾಪುರದಲ್ಲಿ ಕೂಡ ಸಂಪೂರ್ಣ ಬಂದ್ ವಾತವಾರಣ ಕಂಡುಬಂದಿತ್ತು. ಈ ನಡುವೆ ಅನಾವಶ್ಯಕವಾಗಿ ರಸ್ತೆಗೆ ಬಂದವರಿಗೆ ಪೊಲೀಸರು ಸರಿಯಾಗಿಯೇ ಪಾಠ ಕಳಿಸಿದರು.
ಅನಾವಶ್ಯಕವಾಗಿ ರಸ್ತೆಗೆ ಬರುವವರ ವಿರುದ್ಧ ಪೊಲೀಸರು ಹೊಸ ಕ್ರಮ ಕೈಗೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಲಾಠಿ ಬೀಸಿದ್ದ ಪೊಲೀಸರು ರಸ್ತೆಗೀಳಿಯುತ್ತಿರುವರ ವಿರುದ್ಧ ಬಸ್ಕಿ ಅಸ್ತ್ರ ಪ್ರಯೋಗಿಸಿದ್ದಾರೆ.
ಅನಾವಶ್ಯಕವಾಗಿ ರಸ್ತೆಗೆ ಇಳಿಯುವವರ ಬಳಿ ಹತ್ತು ಬಸ್ಕಿ ಹೊಡೆಸಿ ಮನೆಗೆ ಕಳಿಸಿದ ಪ್ರಸಂಗ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರ ಸಿಟಿಯಲ್ಲೇ ಪೊಲೀಸರು ಬಸ್ಕಿ ಅಸ್ತ್ರ ಪ್ರಯೋಗಿಸುವ ಮೂಲಕ ಒಂದು ಹಂತದಲ್ಲಿ ಜನರನ್ನು ನಿಯಂತ್ರಿಸಲು ಹೊಸ ಅಸ್ತ್ರ ಪ್ರಯೋಗಿಸಿದಂತಾಗಿದೆ.