ಮಂಗಳೂರು, ಮಾ 25 (DaijiworldNews/SM): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯ ನಿಯಂತ್ರಣ ಸಂಬಂಧ ಲಾಕ್ ಡೌನ್ ತೀವ್ರಗೊಳಿಸಲಾಗಿದೆ. ಜನತೆ ಮನೆಯಿಂದ ಹೊರಗಡೆ ಬರದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಈ ನಡುವೆ ದಿನ ಬಳಕೆ ವಸ್ತುಗಳ ಅಂಗಡಿಗಳನ್ನು ಮುಚ್ಚುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ದಿನ ಬಳಕೆ ವಸ್ತುಗಳ ಅಂಗಡಿ ತೆರೆದಿರುತ್ತದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 12ರ ತನಕ ದಿನ ಬಳಕೆ ವಸ್ತುಗಳ ಅಂಗಡಿ ತೆರೆದಿರುತ್ತದೆ.
ಈ ಹಿಂದೆ ರಾಜ್ಯ ಸರ್ಕಾರ ನೀಡಿದ ಆದೇಶವನ್ನು ಜಿಲ್ಲಾಡಳಿತ ಮುಂದುವರಿಸಲಿದೆ. ದಿನಬಳಕೆಯ ಸಾಮಾಗ್ರಿ ತರುವ ವಾಹನಗಳಿಗೆ ಯಾವುದೇ ತಡೆ ಇಲ್ಲ. ಜನರು ಮುಗಿಬಿದ್ದು ಖರೀದಿಸುವ ಅಗತ್ಯತೆ ಇಲ್ಲ ಎಂದಿರುವ ಅವರು ಮನೆ ಮನೆಗೆ ದಿನ ನಿತ್ಯದ ಸಾಮಾಗ್ರಿ ತಲುಪಿಸುವ ನಿರ್ಧಾರ ಜಿಲ್ಲಾಡಳಿತ ಇಲ್ಲಿಯ ತನಕ ಜಾರಿಗೆ ತಂದಿಲ್ಲ ಎಂದಿದ್ದಾರೆ.
ಇನ್ನು ಮನೆ ಮನೆಗಳಿಗೆ ಅಗತ್ಯ ವಸ್ಥ್ಗಳನ್ನು ತಲುಪಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಂಸದ ನಳಿನ್ ಹೇಳಿದ್ದರು. ಆದರೆ, ಅಂತಿಮ ನಿರ್ಧಾರವಾಗಿಲ್ಲ.ಈ ಹಿನ್ನೆಲೆಯಲ್ಲಿ ಎಂದಿನಂತೆ ಅಂಗಡಿ ತೆರೆದಿರುತ್ತದೆ ಹಾಗೂ ಜನ ಖರೀದಿಗೆ ಮುಗಿಬಿದ್ದು ಖರೀದಿಸುವ ಅಗತ್ಯತೆ ಇಲ್ಲ ಎಂದಿದ್ದಾರೆ.