ಮಂಗಳೂರು, ಮಾ.26 (Daijiworld News/MB) : ಸರ್ಕಾರದ ಸೂಚನೆಗೆ ಕೊನೆಗೂ ಸಾರ್ವಜನಿಕರು ಎಚ್ಚೆತ್ತಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.
ನಗರದ ಮಲ್ಲಿಕಟ್ಟೆ ಮಾರ್ಕೆಟ್ನಲ್ಲಿ ಸೇಫ್ಟಿ ಲೈನ್ ಇಲ್ಲದಿದ್ದರೂ ನಾಗರಿಕರು ಎರಡು ಫೀಟ್ ಅಂತರ ಕಾಯ್ದುಕೊಂಡಿದ್ದು ಮಾರ್ಕೇಟ್ನಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗಿದೆ.
ಖರೀದಿ ಮಾಡುವ ಸಂದರ್ಭದಲ್ಲಿ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕು, ಇಲ್ಲದಿದ್ದಲ್ಲಿ ಅಂಗಡಿ ಮಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಂಗಡಿ ಮಾಲಕರಿಗೆ ಪಾಲಿಕೆ ಸೂಚಿಸಿದ್ದು ವರ್ತಕರು ಗ್ರಾಹಕರಲ್ಲಿ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡುತ್ತಿದ್ದಾರೆ.
ಇನ್ನು ಜನರು ಮಂಗಳೂರಿನ ಮೆಡಿಕಲ್, ಸೂಪರ್ ಮಾರ್ಕೆಟ್ ಸೇರಿ ಹಲವೆಡೆ ಸಾಮಾಜಿಕ ಅಂತರ ಕಾಯ್ದುಕೊಂಡಿದೆ.
ಇನ್ನು ಸೆಂಟ್ರಲ್ ಮಾರ್ಕೆಟ್ ಗೆ ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧಿಸಿದ್ದು ಚಿಲ್ಲರೆ ವ್ಯಾಪರಿಗಳಿಗೆ ಮಾತ್ರ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ವ್ಯಾಪಾರಕ್ಕೆ ಅನುಮತಿ ನೀಡಿದೆ. ಸಾರ್ವಜನಿಕರಿಗೆ ಸ್ಥಳೀಯ ಅಂಗಡಿಗಳಲ್ಲಿ ಮಾತ್ರ ಬೆಳಗ್ಗೆ 6 ರಿಂದ 12ಗಂಟೆವರೆಗೆ ಖರೀದಿಗೆ ಜಿಲ್ಲಾಡಳಿತ ಅನುಮತಿ ನೀಡಿದೆ.
ಇಂದು ಸೆಂಟ್ರಲ್ ಮಾರ್ಕೆಟ್ನಲ್ಲಿ ತರಕಾರಿ ಕೊಳ್ಳಲು ವ್ಯಾಪಾರಿಗಳು ಮುಗಿಬಿದ್ದಿದ್ದು ಲಾರಿಯಿಂದ ಹೊರರಾಜ್ಯದಿಂದ ಬಂದಿರುವ ತರಕಾರಿಗೆ ಭಾರೀ ಬೇಡಿಕೆ ಇದೆ. ಆದರೆ ಇಲ್ಲಿ ವ್ಯಾಪಾರಿಗಳು ಬೇಜವಾಬ್ದಾರಿ ಮೆರೆದಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬೇಕಾಬಿಟ್ಟಿ ವ್ಯವಹಾರ ನಡೆಸುತ್ತಿದ್ದಾರೆ.
ಅಂತರ ಕಾಯ್ದುಕೊಳ್ಳುವಂತೆ ಹೋಲ್ ಸೇಲ್ ವ್ಯಾಪಾರಿಗಳ ಮನವಿ ಮಾಡಿದ್ದು ಇದಕ್ಕೂ ಕ್ಯಾರೇ ಅನ್ನದ ಚಿಲ್ಲರೆ ವ್ಯಾಪಾರಿಗಳು ಸಾಲಾಗಿ ನಿಂತರೂ ಅಂತರ ಕಾಯ್ದುಕೊಂಡಿಲ್ಲ.