ಕಾಸರಗೋಡು, ಮಾ 26 (DaijiworldNews/SM): ಕೇರಳದಲ್ಲಿ ಇದುವರೆಗೆ 138 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಈ ಪೈಕಿ 126 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ತೆರಳಿದ್ದಾರೆ.
ಇನ್ನು ಕಾಸರಗೋಡಿನಲ್ಲಿ ಇದುವರೆಗೆ 47 ಪ್ರಕರಣಗಳು ಕಂಡುಬಂದಿದ್ದು, ಈ ಪೈಕಿ ಮೂರು ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದೆ. ಇನ್ನು 44 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಸರಗೋಡಿನಲ್ಲಿ ಸೋಂಕಿತರಿಂದ ವೈರಸ್ ಗೆ ತುತ್ತಾದವರು ಕೇವಲ ನಾಲ್ವರು ಮಾತ್ರವೇ ಆಗಿದ್ದು, ಉಳಿದ ಸೋಂಕಿತರು ವಿದೇಶದಿಂದ ಬಂದವರಾಗಿದ್ದಾರೆ.