ಉಡುಪಿ, ಮಾ 26 (DaijiworldNews/SM): ಜಿಲ್ಲೆಯಲ್ಲಿ ಮತ್ತೆ 16 ಮಂದಿ ಶಂಕಿತ ಕೊರೊನಾ ಪತ್ತೆ ಪ್ರಕರಣಗಳು ಪತ್ತೆಯಾಗಿದೆ. ಸೋಂಕಿನ ಶಂಕಿತ ಲಕ್ಷಣಗಳು ಪತ್ತೆಯಾದವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಇರಿಸಲಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.
ಕಳೆದ ಕೆಲವು ದಿನಗಳಿಂದ ಈವರೆಗೆ ಉಡುಪಿಯಲ್ಲಿ 103 ಶಂಕಿತ ಪ್ರಕರಣಗಳು ಪತ್ತೆಯಾಗಿತ್ತು. ಇವುಗಳ ಪೈಕಿ ಒಂದು ಪಾಸಿಟಿವ್ ಪ್ರಕರಣವಾಗಿತ್ತು. ಹಾಗೂ 79 ಮಂದಿಯಲ್ಲಿ ನೆಗೆಟಿವ್ ಲಕ್ಷಣಗಳು ಬಂದಿವೆ. ಇನ್ನುಳಿದಂತೆ ಸುಮಾರು 23 ಮಂದಿಯ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ.