ಮಂಗಳೂರು, ಮಾ 26 (DaijiworldNews/SM): ಕೊರೋನ ವೈರಸ್ ನಿಯಂತ್ರಣಕ್ಕೆ ಪ್ರಧಾನಮಂತ್ರಿಗಳು ದೇಶವನ್ನೇ ಲಾಕ್ ಡೌನ್ ಮಾಡಿ ಆದೇಶ ನೀಡಿದ್ದಾರೆ. ಈ ನಡುವೆ ಸೋಂಕು ನಿಯಂತ್ರಣದ ದೃಷ್ಠಿಯಿಂದ ಶುಕ್ರವಾರದ ಜುಮಾ ನಮಾಝನ್ನು ಕೂಡ ಮನೆಯಲ್ಲೇ ನಿರ್ವಹಿಸುವಂತೆ ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಮತ್ತು ಬೇಕಲ ಇಬ್ರಾಹೀಂ ಮುಸ್ಲಿಯಾರ್ ತಿಳಿಸಿದ್ದಾರೆ.
ಸಮಾಜದ ಹಿತದೃಷ್ಟಿಯಿಂದ ದಿನದ ಐದು ಬಾರಿಯ ನಮಾಝ್ ಈಗಾಗಲೇ ಮನೆಯಿಂದಲೇ ಮಾಡಲಾಗುತ್ತಿದೆ. ಇದೇ ಮಾದರಿಯಲ್ಲಿ ಶುಕ್ರವಾರದ ಜುಮಾ ನಮಾಜ್ ನ್ನು ಮನೆಯಿಂದಲೇ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಜನ ಸಂದಣಿಯಿರುವ ಕಡೆ ರೋಗ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಈಗಾಗಲೇ ತಿಳಿಸಿದ್ದಾರೆ. ಸಮಾಜದ ಹಿತದೃಷ್ಟಿಯಿಂದ ದೆಶದಲ್ಲಿ ನೀಡಲಾಗಿರುವ ಆದೇಶವನ್ನು ಎಲ್ಲರೂ ಪಾಲಿಸುವ ಅಗತ್ಯವಿದೆ. ಹಾಗಾಗಿ ಮಸೀದಿಯಲ್ಲಿ ಶುಕ್ರವಾರದ ಜುಮಾ ನಮಾಝ್ನ ಬದಲು ತಮ್ಮ ಮನೆಗಳಲ್ಲೇ ಮಾಡುವಂತೆ ಖಾಝಿಗಳು ಆದೇಶ ಹೊರಡಿಸಿದ್ದಾರೆ.