ಮಂಗಳೂರು, ಮಾ 26 (DaijiworldNews/SM): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರದಂದು ಕೂಡ ಯಾವುದೇ ಕೊರೊನಾ ಸೋಂಕು ದೃಢಪಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನ ಮತ್ತೊಮ್ಮೆ ನಿಟ್ಟುಸಿರು ಬಿಡುವಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರವೂ ಎಲ್ಲಾ ಪರೀಕ್ಷಾ ಮಾದರಿಗಳು ನೆಗೆಟಿವ್ ಆಗಿದ್ದವು. ಅದರ ಮುಂದುವರೆದ ಭಾಗವಾಗಿ ಗುರುವಾರ ಬಂದಿರುವ ಎಲ್ಲಾ ವರದಿಗಳು ನೆಗೆಟಿವ್ ಆಗಿವೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ತೀವ್ರವಾದ ಮುನ್ನೆಚ್ಚರಿಕೆ ವಹಿಸಿರುವುದರ ಫಲವಾಗಿ ಈ ಮಾದರಿಯ ವರದಿ ಲಭ್ಯವಾಗಲು ಕಾರಣವಾಗಿದೆ.
ಗುರುವಾರದಂದು 46 ಮಂದಿಯನ್ನು ಸ್ಕ್ರೀನಿಂಗ್ ನಡೆಸಲಾಗಿದೆ. ಆ ಮೂಲಕ ಗುರುವಾರದ ತನಕ ಒಟ್ಟು 38051 ಮಂದಿಯನ್ನು ಸ್ಕ್ರೀನಿಂಗ್ ನಡೆಸಲಾಗಿದೆ.
ಗುರುವಾರ ಲಭ್ಯವಾದ ವರದಿ:
ಮನೆಯಲ್ಲಿ ನಿಗಾದಲ್ಲಿರುವವರು-2902 ಮಂದಿ
ಇಎಸ್ ಐ ಆಸ್ಪತ್ರೆಯಲ್ಲಿ ನಿಗಾದಲ್ಲಿರುವವರು-27 ಮಂದಿ
೨೮ ದಿನಗಳ ನಿಗಾ ಪೂರೈಸಿದವರು-20 ಮಂದಿ
ಪರೀಕ್ಷೆಗೆ ಕಳುಹಿಸಿದ ಪ್ರಕರಣಗಳು-4
ದೊರೆತಿರುವ ಪರೀಕ್ಷಾ ವರದಿ-9(ಎಲ್ಲವೂ ನೆಗೆಟಿವ್)
ನಿಗಾ ವಹಿಸಲು ಆಸ್ಪತ್ರೆಗೆ ದಾಖಲಾದವರು-3