ಪುತ್ತೂರು, ಮಾ 27 (Daijiworld News/MSP): ಲೌಕ್ ಡೌನ್ ಹಿನ್ನಲೆಯಲ್ಲಿ ನೆಟ್ಟಣ ರೈಲ್ವೆ ನಿಲ್ದಾಣ ಬಳಿ ಬಿಜಾಪುರದ 30 ಜನ ತಮ್ಮೂರಿಗೆ ಹಿಂತಿರುಗಲಾಗದೆ ಸಂಕಷ್ಟದಲ್ಲಿ ಸಿಲುಕಿರುವ ಘಟನೆ ನಡೆದಿದೆ.
ಇವರು ಪುತ್ತೂರಿನ ಗಾಳಿಮುಖ ಎಂಬಲ್ಲಿ ಕೆಲಸ ಮಾಡುತ್ತಿದ್ದರು.
ಈ ಕಾರ್ಮಿಕರು ಕೊರೊನಾ ಹಿನ್ನೆಲೆಯಲ್ಲಿ ಬಿಜಾಪುರದ ತಮ್ಮ ಊರುಗಳಿಗೆ ತೆರಳುವ ವೇಳೆ ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣದಲ್ಲಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರೆಲ್ಲರೂ ಒಂದೇ ಊರಿನವರಾಗಿದ್ದಾರೆ ಎಂದು ತಿಳಿದುಬಂದಿದ್ದು, , ಇವರೊಂದಿಗೆ ಕೊಡ್ಲಿಪೇಟೆಯವರು ಒಬ್ಬರು ಇದ್ದಾರೆ. ಈ ಮೂವತ್ತು ಜನರೂ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ರೈಲ್ವೆ ಸ್ಟೇಷನ್ ನಲ್ಲಿ ಬಾಕಿಯಾಗಿ ಅನ್ನ ಆಹಾರಗಳಿಲ್ಲದೆ ಪರದಾಡುತ್ತಿದ್ದಾರೆ.
ಬಿಜಾಪುರ ಮೂಲದ ಕಾರ್ಮಿಕರೆಲ್ಲರೂ ಪುತ್ತೂರು ಸಮೀಪದ ಗಾಳಿಮುಖ ಎಂಬಲ್ಲಿ ಗೇರುಬೀಜದ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಲೌಕ್ ಡೌನ್ ಹಿನ್ನಲೆಯಲ್ಲಿ ತಮ್ಮೂರಿಗೆ ತೆರಳಲು ಮುಂದಾಗಿದ್ದಾರೆ .
ಈ ಸಂದರ್ಭದಲ್ಲಿ ಸರಕಾರದ ಆದೇಶದಿಂದ ರೈಲು ಸಂಚಾರ ಸ್ಥಗಿತ ಗೊಂಡಿದ್ದು, ಸಂಕಷ್ಟದಲ್ಲಿ ಸಿಲುಕಿದ್ದಾರೆ.
ತಾತ್ಕಲಿಕವಾಗಿ ಕಡಬ ಪೊಲೀಸ್ ಅಧಿಕಾರಿಗಳು ಆಹಾರದ ವ್ಯವಸ್ಥೆ ಮಾಡಿ ಕೊಡುತ್ತಿದ್ದಾರೆ. ಕಾರ್ಮಿಕರ ತಂಡದಲ್ಲಿ ಮಹಿಳೆಯರು ಮತ್ತು ಮಕ್ಕಳು ಇದ್ದು ಮಲಗಲು ವ್ಯವಸ್ಥೆಯೂ ಇಲ್ಲದಂತಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿದೆ.