ಕಾಸರಗೋಡು, ಮಾ 27 (DaijiworldNews/SM): ಜಿಲ್ಲೆಯಲ್ಲಿ 34 ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಆತಂಕ ತೀವ್ರಗೊಂಡಿದೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 81ಕ್ಕೇರಿಕೆಯಾಗಿದೆ.
ಇನ್ನು ಇಡೀ ಕೇರಳದಲ್ಲಿ ಇಲ್ಲಿಯ ತನಕ ಒಟ್ಟು 164 ಮಂದಿಯಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿದೆ. ನಿರಂಟರವಾಗಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರಕಾರ ತೀವ್ರ ನಿಗಾ ವಹಿಸಿಕೊಂಡಿದೆ.
ಇನ್ನು ಗುರುವಾರದಂದು ಕಾಸರಗೋಡಿನಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ದಾಖಲಾಗಿರಲಿಲ್ಲ. ಇದರಿಂದಾಗಿ ಜನರು ನಿಟ್ಟುಸಿರುವ ಬಿಡುವಂತಾಗಿತ್ತು. ಆದರೆ, ಮತ್ತೆ ಒಮ್ಮಿಂದೊಮ್ಮೆ 34 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದರಿಂದ ಆತಂಕ ಏಕಾಏಕಿ ಹೆಚ್ಚಾಗಲು ಕಾರಣವಾಗಿದೆ.
ಇನ್ನು ಕೊರೊನಾ ನಿಯಂತ್ರಣಕ್ಕೆ ಸರಕಾರದ ಹಂತದಲ್ಲಿ ಎಲ್ಲಾ ಕ್ರಮಕೈಗೊಳ್ಳಲಾಗಿದೆ. ಕಾಸರಗೋಡಿನೆಲ್ಲೆಡೆ ಹೈಅಲರ್ಟ್ ಕೈಗೊಳ್ಳಲಾಗಿದೆ. ಜನತೆ ಅಗತ್ಯವಾಗಿ ಮನೆಯಲ್ಲೇ ಇರಬೇಕಾಗಿದ್ದು, ಪ್ರಕರಣ ನಿಯಂತ್ರಿಸಲು ಸಹಕರಿಸುವ ಅಗತ್ಯತೆ ಇದೆ.