ಉಳ್ಳಾಲ, ಮಾ 27 (DaijiworldNews/SM): ಕೋವಿಡ್ 19 ಸೋಂಕು ದೃಡಪಟ್ಟಿರುವ ಮಗು ವಾಸವಿದ್ದ ಸಜಿಪನಡು ಗ್ರಾಮದಲ್ಲಿ ಎಲ್ಲಾ ಮನೆಯವರು ಸ್ವಯಂ ಕ್ವಾರೆಂಟೆನ್ಗೆ ಒಳಪಡಬೇಕು ಪ್ರತೀ ಮನೆಗೆ ಅಗತ್ಯ ದಿನನಿತ್ಯದ ಸಾಮಾಗ್ರಿ ಮತ್ತು ಪಡಿತರ ಸಾಮಾಗ್ರಿಯನ್ನು ಮುಂದಿನ 21 ದಿನಗಳ ವ್ಯವಸ್ಥೆ ಮಾಡಲು ಸ್ಥಳೀಯ ಗ್ರಾಮ ಪಂಚಾಯತ್, ಕಂದಾಯ ಅಧಿಕಾರಿಗಳು ಮತ್ತು ಪಡಿತರ ವಿಭಾಗ ಕಾರ್ಯ ನಿರ್ವಹಿಸಲಿದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ತಿಳಿಸಿದರು.
ಸಜಿಪನಡು ಗ್ರಾಮ ಪಂಚಾಯತ್ನಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿ ಸೋಂಕು ದೃಢಪಟ್ಟಿರುವ ಮಗು ಮತ್ತು ಆ ಮಗುವಿನ ತಾಯಿ ಸಂಚರಿಸಿದ ಟ್ರಾವೆಲ್ಹಿಸ್ಟರಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದು ಸಂಪರ್ಕದಲ್ಲಿದ್ದ ಅವರ ಕುಟುಂಬದ ಸದಸ್ಯರನ್ನು ಕ್ವಾರೆಂಟ್ನ್ಗೆ ಒಳಪಡಿಸಿದ್ದು, ಸ್ಥಳೀಯವಾಗಿ ಒಂದು ಮನೆಯಲ್ಲಿ ಅವರನ್ನು ಇಡಲಾಗಿದೆ.
ಸಜಿಪನಡು ಗ್ರಾಮದ ಸರ್ವೇಕ್ಷಣೆಯನ್ನು ಆರೋಗ್ಯ ಇಲಾಖೆ ನೋಡಿಕೊಳ್ಳಲಿದ್ದು ಗ್ರಾಮಕ್ಕೆ ಹೊರಗಿನಿಂದ ಬಾರದ ರೀತಿಯಲ್ಲಿ ಮತ್ತು ಗ್ರಾಮದಿಂದ ಹೊರಗೆ ಹೋಗದ ನಿಟ್ಟಿನಲ್ಲಿ ಪೊಲೀಸರು ನಿಗಾ ವಹಿಸಲಿದ್ದಾರೆ ಎಂದರು.
ಗ್ರಾಮದ ಜನರಿಗೆ ಉಚಿತ ಮಾಸ್ಕ್ :
ಸಜಿಪ ನಡು ಗ್ರಾಮದ ಎಲ್ಲಾ ಜನರಿಗೆ ಕ್ಷೇತ್ರದ ವತಿಯಿಂದ ಉಚಿತ ಮಾಸ್ಕ್ ಹಂಚಲಾಗುವುದು. ಇಲ್ಲಿ ಯಾವುದೇ ರೋಗ ಲಕ್ಷಣ ಅಥವಾ ಸಣ್ಣಪುಟ್ಟ ಸಮಸ್ಯೆ ಇದ್ದರೆ ಶಾಸಕರ ಕಚೇರಿಯನ್ನು ದೂರವಾಣಿ ಮೂಲಕ ಸಂಪರ್ಕಿಸ ಬಹುದು ಮತ್ತು ಗ್ರಾಮ ಪಂಚಾಯತ್ ಸದಾ ಸ್ಪಂದನೆಗೆ ತಯಾರಿದೆ ಎಂದರು.
20 ಮನೆಗಳ ಮೇಲೆ ವಿಶೇಷ ನಿಗಾ :
ಮಗು ವಾಸವಾಗಿದ್ದ ಮನೆಯ ಸುತ್ತಮುತ್ತಿನ 20 ಮನೆಗಳನ್ನು ಗುರುತಿಸಿದ್ದು ಈ ಮನೆಗಳ ಮೇಲೆ ವಿಸೇಷ ನಿಗಾ ವಹಿಸಲಾಗುವುದು ಈ ಮನೆಗಳಲ್ಲಿರುವ ಸುಮಾರು 150 ಮಂದಿಗೆ ಕಡ್ಡಾಯವಾಗಿ ಮನೆಯಿಂದ ಹೊರಗೆ ಬರದಂತೆ ಕ್ವಾರೆಂಟೈನ್ ವಿ„ಸಲಾಗುವುದು ಎಂದರು.
ಮೊಂಟೆಪದವಿನಲ್ಲಿ ಅಧಿಕಾರಿಗಳಿಂದ ತಪಾಸಣೆ :
ಮಗುವಿನ ತಾಯಿಯ ಮನೆಯಾಗಿರುವಮೊಂಟೆಪದವಿನಲ್ಲಿ ಮಹಿಳೆಒಂದು ವಾರಗಳ ಕಾಲ ತಂಗಿದ್ದರಿಂದ ಆ ಮನೆಯ ಸುತ್ತಮುತ್ತ ಅಧಿಕಾರಿಗಳು ತಪಾಸಣ ನಡೆಸಿದ್ದು, ಆ ಮಹಿಳೆಯ ತಾಯಿಯ ಮನೆಯಲ್ಲಿಸಂಪರ್ಕದಲ್ಲಿದ್ದ ಸದಸ್ಯರನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಮಹಿಳೆ ಕೇರಳದಿಂದ ಒಳಮಾರ್ಗವಾಗಿ ಮೊಂಟೆಪದವು, ಮುಡಿಪು, ಸಜಿಪಕ್ಕೆ ತೆರಳಿದ್ದು ಇದರ ಹಿಸ್ಟರಿಯನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.