ಉಡುಪಿ, ಮಾ 28 (Daijiworld News/MSP): ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಗಡಿಗಳನ್ನು ಬಂದ್ ಮಾಡಲಾಗಿದೆ. ಇನ್ನು ಉಡುಪಿ ಜಿಲ್ಲಾ ಗಡಿಗಳನ್ನು ದಾಟಲು ಅವಕಾಶವಿಲ್ಲದ ಕಾರಣ ಉತ್ತರ ಕರ್ನಾಟಕ ಭಾಗದ ಜಿಲ್ಲೆಯ ಸುಮಾರು 400 ಕ್ಕೂ ಹೆಚ್ಚು ಕಾರ್ಮಿಕರು ಬೀಡಿನಗುಡ್ಡೆ ಮೈದಾನ ಸಿಲುಕಿಕೊಂಡಿರುವ ವರದಿಯಾಗಿದೆ.
ಕೆಲಸಕ್ಕಾಗಿ ಕರಾವಳಿಪ್ರದೇಶಕ್ಕೆ ಬಂದ ಇವರು ಕಟ್ಟಡ ಕಾರ್ಮಿಕರಾಗಿ, ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಭಾರತದಾದ್ಯಂತ ಘೋಷಣೆಯಾಗಿರುವ ಲೌಕ್ ಡೌನ್ ನಿಂದ ಇವೆರೆಲ್ಲರಿಗೂ ಕೆಲಸ , ಆಹಾರಗಳಿಲ್ಲದೆ ತೊಂದರೆ ಸಿಲುಕಿದ್ದು ಹೀಗಾಗಿ ಕಾರ್ಮಿಕರು ತಮ್ಮ ಕುಟುಂಬ ಸಮೇತ ತಮ್ಮೂರಿಗೆ ಲಾರಿಗಳಲ್ಲಿ ಮತ್ತು ಟೆಂಪೊಗಳಲ್ಲಿ ಪ್ರಯಾಣಿಸುತ್ತಿದ್ದರು.
ಉಡುಪಿ ಜಿಲ್ಲೆಯ ಗಡಿಗಳನ್ನು ಹೊರ ಹಾಗೂ ಒಳ ಪ್ರವೇಶಿಸದಂತೆ ಬಂದ್ ಮಾಡಿರುವ ಕಾರಣ ಇವರಿಗೆ ಪ್ರಯಾಣವನ್ನು ಮುಂದುವರಿಸಲು ಅನುಮತಿ ನೀಡದೆ ಜಿಲ್ಲೆಯ ಶಿರೂರು ಗಡಿಯಲ್ಲಿ ತಡೆದು ನಿಲ್ಲಿಸಲಾಯಿತು. ಕುಂದಾಪುರ ಪೊಲೀಸರು ಶುಕ್ರವಾರ ಆಹಾರ ವ್ಯವಸ್ಥೆ ಮಾಡಿದ್ದು ಮುಂದೇನು ಎನ್ನುವ ಚಿಂತೆ ಇವರನ್ನು ಕಾಡತೊಡಗಿದೆ. ಉಡುಪಿ ಜಿಲ್ಲಾಡಳಿತ ಇತ್ತಕಡೆ ಗಮನಹರಿಸುವುದು ಸೂಕ್ತ.