ಮೂಡುಬಿದಿರೆ, ಮಾ.29 (Daijiworld News/MB) : ಬಂಟ್ವಾಳದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಕೊಪ್ಪಳದ 11 ಜನ ಕಾರ್ಮಿಕರು ದೇಶ ಲಾಕ್ಡೌನ್ ಆಗಿರುವ ಹಿನ್ನಲೆಯಲ್ಲಿ ತಮ್ಮೂರಿಗೆ ಹೋಗಲಾಗದೆ ಮೂಡುಬಿದಿರೆಯಲ್ಲೇ ಲಾಕ್ ಆದ ಘಟನೆ ಶನಿವಾರ ನಡೆದಿದೆ.
ಕೊಪ್ಪಳದ 11 ಜನ ಕಾರ್ಮಿಕರು ಬಂಟ್ವಾಳದಿಂದ ಕಾಲ್ನಡಿಗೆಯಲ್ಲೇ ತಮ್ಮೂರಿಗೆ ಹೊರಟಿದ್ದು ಅವರಿಗೆ ಮೂಡುಬಿದಿರೆಯ ಪೊಲೀಸ್ ನಿರೀಕ್ಷಕರು ನಿಮ್ಮೂರಿಗೆ ಹೋಗಲು ಸಹಾಯ ಮಾಡಬಹುದು ಎಂದು ಯಾರೋ ಹೇಳಿದ್ದನ್ನು ಕೇಳಿದ್ದ ಕಾರ್ಮಿಕರು ಮೂಡುಬಿದಿರೆ ಠಾಣೆಗೆ ಸಹಾಯ ಕೋರಿದರು.
ಅವರನ್ನು ಅವರ ಊರಿಗೆ ಕಳುಹಿಸಿಕೊಡಲು ಅಸಾಧ್ಯವಾದ ಹಿನ್ನಲೆಯಲ್ಲಿ ಪೊಲೀಸ್ ನಿರೀಕ್ಷಕ ದಿನೇಶ್ ಕುಮಾರ್ ಅವರು ತಾಲೂಕು ತಹಶೀಲ್ದಾರ್ ಅನಿತಾ ಲಕ್ಷ್ಮೀ ಅವರು ಜಂಟಿಯಾಗಿ ಊಟದದ ವ್ಯವಸ್ಥೆ ಮತ್ತು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.