ಮಂಗಳೂರು ಮಾ 29 (Daijiworld News/MSP): ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಸಂಪೂರ್ಣ ಬಂದ್ ಆಗಿದ್ದ ದ.ಕ. ಜಿಲ್ಲೆ ಮಾ. 30 ರ ಸೋಮವಾರವೂ ಸಂಪೂರ್ಣ ಬಂದ್ ಆಗಿರಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಈ ವಿಚಾರ ತಿಳಿಸಿದ್ದು, ಕೊರೊನಾ ಹರಡದಂತೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದ್ದು ಸೋಮವಾರವೂ ಬಂದ್ ಮುಂದುವರಿಯಲಿದೆ. ಆದರೆ , ಮಾ. 31 ರ ಮಂಗಳವಾರ ಬೆಳಗ್ಗೆ 6ರಿಂದ ಮಧ್ಯಾಹ 3 ಗಂಟೆಯವರೆಗೆ ದಿನಸಿ ಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುವುದು.
ದಿನಸಿ ಅಂಗಡಿ ಮಂಗಳವಾರ ತೆರೆಯಲಿದ್ದು, ಒಂದು ಕುಟುಂಬದ ಒಬ್ಬರಿಗೆ ಮಾತ್ರ ಸಾಮಗ್ರಿ ಖರೀದಿಸಲು ಹೊರಬರಲು ಅವಕಾಶ. ಈ ಸಂದರ್ಭದಲ್ಲಿ ದಿನಸಿ ಸಾಮಾಗ್ರಿಗಳಿಗೆ ಮಳಿಗೆಯವರು ನಿಗದಿಗಿಂತ ಅಧಿಕ ದರ ವಸೂಲಿ ಮಾಡುವುದು ಕಂಡುಬಂದರೆ ಲೈಸನ್ಸ್ ಅಂತಹ ಅಂಗಡಿಗಳ ಲೈಸನ್ಸ್ ಕ್ಯಾನ್ಸಲ್ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ಬಿಪಿಎಲ್ ಕಾರ್ಡುದಾರರಿಗೆ 2 ತಿಂಗಳ ಮುಂಗಡ ಪಡಿತರ ನೀಡಲು ಏ.2 ರಿಂದ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 7 ರಿಂದ ರಾತ್ರಿ 8 ರವರೆಗೆ ಪಡಿತರ ನೀಡಲು ಸೂಚಿಸಲಾಗಿದೆ ಎಂದರು.