ಮಂಗಳೂರು, ಮಾ 29 (DaijiworldNews/SM): ದ.ಕ. ಜಿಲ್ಲೆಯಲ್ಲಿ ರವಿವಾರದಂದು ಕೊರೊನಾ ಸಂಬಂಧಿಸಿ ಎಲ್ಲವೂ ನೆಗೆಟಿವ್ ಪ್ರಕರಣಗಳೇ ದಾಖಲಾಗಿವೆ. ರವಿವಾರದಂದು ಐವರ ಪರೀಕ್ಷಾ ವರದಿ ಲಭ್ಯವಾಗಿದ್ದು, ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ.
ಮಾರ್ಚ್ 27ರಂದು ದ.ಕ. ಜಿಲ್ಲೆಯಲ್ಲಿ 10 ತಿಂಗಳ ಕಂದಮ್ಮ ಸೇರಿದಂತೆ, 21 ವರ್ಷದ ಯುವಕನನ್ನು ಸೋಂಕು ಪತ್ತೆಯಾಗಿತ್ತು. ಆದರೆ, ಮಾರ್ಚ್ 28ರ ಶನಿವಾರದಂದು ಯಾವುದೇ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಇದೇ ಪರಿಸ್ಥಿತಿ ಮುಂದುವರೆದಿದ್ದು, ರವಿವಾರವೂ ಕೂಡ ಯಾವುದೇ ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ.
ರವಿವಾರ ಲಭಿಸಿದ ಮಾಹಿತಿ:
22 ಮಂದಿ - ಇಂದು ಸ್ಕ್ರೀನಿಂಗ್ ಗೆ ಒಳಪಟ್ಟವರು
38,231 ಮಂದಿ - ಜಿಲ್ಲೆಯಲ್ಲಿ ಒಟ್ಟು ಮಂದಿ ಸ್ಕ್ರೀನಿಂಗ್ಗೊಳಪಟ್ಟಿದ್ದಾರೆ
5875 ಮಂದಿ - ಹೋಂ ಕ್ವಾರಂಟೈನ್ನಲ್ಲಿರುವವರು
29 ಮಂದಿ - ಇಎಸ್ ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿರುವವರು
169 ಮಂದಿ - 28 ದಿನ ಹೋಂ ಕ್ವಾರಂಟೈನ್ ಪೂರ್ಣಗೊಳಿಸಿದವರು
14 ಮಂದಿ - ಇಂದು ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದವರು
05 ಮಂದಿ - ಸ್ಯಾಂಪಲ್ ವರದಿ ಬಂದಿದ್ದು ಎಲ್ಲವೂ ನೆಗೆಟಿವ್
11 ಮಂದಿ - ಒಟ್ಟು ನಿಗಾದಲ್ಲಿರುವವರು