ವಿಟ್ಲ, ಮಾ 29 (DaijiworldNews/SM): ಪೊಲೀಸರ ಕಣ್ಣು ತಪ್ಪಿಸಿ ಕೇರಳ ಕರ್ನಾಟಕ ಗಡಿ ಭಾಗವಾದ ಚೆಕ್ಕುತ್ತಿಯಲ್ಲಿ ಕೇರಳದ ಜನರು ಕಾಲು ದಾರಿಯ ಮೂಲಕ ಓಡಾಡುತ್ತಿದ್ದು, ವಿಟ್ಲ ಎಸ್ ಐ ವಿನೋದ್ ಎಸ್. ಕೆ. ಅವರ ನೇತೃತ್ವದ ತಂಡ ಮೂರು ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸಾರಡ್ಕ ಚೆಕ್ ಪೋಸ್ಟ್ ಬಂದ್ ಮಾಡಿದ ಬಳಿಕ ಒಳರಸ್ತೆಗಳನ್ನು ಬಳಸಿಕೊಂಡು ವಾಹನ ಬರುವ ದೂರುಗಳು ಬಂದಿದ್ದು, ಇದಕ್ಕಾಗಿ ರಸ್ತೆಯನ್ನು ಬಂದ್ ಮಾಡಿ ಸಂಪರ್ಕ ಕಡಿತ ಮಾಡಲಾಗಿತ್ತು. ಆದರೆ ಸದ್ಯ ಪಂಚಾಯಿತಿ ಕಾಲು ದಾರಿಗೆ ಮೆಟ್ಟಲು ಮಾಡಿಕೊಡುವ ಮೂಲಕ ಕೇರಳದ ಜನರ ಓಡಾಟಕ್ಕೆ ಸಹಕರಿಸಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಗಡಿಯಲ್ಲಿ ವಾರದಿಂದ ಸಾಕಷ್ಟು ಕ್ರಮಗಳನ್ನು ಕೈಗೊಂಡು ಯಾರೊಬ್ಬರೂ ಬರದಂತೆ ಮಾಡುತ್ತಿದ್ದರೆ, ಸಾರಡ್ಕ ಸಮೀಪದ ಚೆಕ್ಕುತ್ತಿ ರಸ್ತೆಯಲ್ಲಿ ನಿರಂತರ ವಾಹನ ಓಡಾಡುತ್ತಿದೆ ಎಂಬ ದೂರುಗಳ ಹಿನ್ನಲೆಯಲ್ಲಿ ಖಾಸಗಿ ವಾಹನದಲ್ಲಿ ಸ್ಥಳೀಯರ ಸೋಗಿನಲ್ಲಿ ಬಂದ ಎಸ್. ಐ. ವಿನೋದ್ ಎಸ್. ಕೆ. ಅವರ ವಿಶೇಷ ತನಿಖಾ ತಂಡ ಜನರ ಸಾಗಾಟಕ್ಕೆ ಬಳಸುತ್ತಿದ್ದ ಒಂದು ಕಾರು ಎರಡು ಬೈಕ್ ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.