ಫೆ. 26 : ವಿದ್ವತ್ ಹಲ್ಲೆ ಪ್ರಕರಣದ ಆರೋಪಿ ನಲಪಾಡ್ ನನ್ನು ಈ ಹಿಂದೆ ಹೊಗಳಿ ತೀವ್ರ ಮುಜುಗರ ಅನುಭವಿಸುತ್ತಿರುವ ನಟ ಪ್ರಕಾಶ್ ರೈ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ನಲಪಾಡ್ ಈ ರೀತಿ ಮಾಡಿದ್ದು ಸರಿಯಲ್ಲ, ಹಿಂದೆ ಅವರನ್ನು ಹೊಗಳಿದ್ದಕ್ಕೆ ನನಗೆ ಈಗ ತೀವ್ರ ಮುಜುಗರವಾಗಿದೆ. ಅಂದು ಸಹಾಯ ಮಾಡುವ ವಿಚಾರ ಬಂದಾಗ ನಲಪಾಡ್ ಆ ಕೂಡಲೇ ಸಹಾಯ ಹಸ್ತ ಚಾಚಿದ್ದ. ಹೀಗಾಗಿ ನಾನು ಇತರರಿಗೂ ಸ್ಫೂರ್ತಿಯಾಗಲಿ ಎಂದು ಶ್ರೀಮಂತರ ಮಕ್ಕಳು ಈ ರೀತಿ ಸಹಾಯ ಮಾಡುತ್ತಾರೆ ಎಂದು ಉದಾಹರಿಸಿದ್ದೆ. ಆದಾದ ಬಳಿಕ ಆತ ರಾಕ್ಷಸನಂತೆ ವರ್ತಿಸುತ್ತಾನೆಂದು ತಿಳಿದಿರಲಿಲ್ಲ. ಈ ಕುಕೃತ್ಯ ಘಟನೆ ತಿಳಿದ ತಕ್ಷಣ ಆತನ ನೀಡಿದ ಹಣ ಹಿಂತಿರುಗಿಸಿದೆ. ಇದು ನನಗೆ ಪಾಠ ಕಲಿಸಿದೆ, ಇನ್ಮುಂದೆ ವೇದಿಕೆಯಲ್ಲಿ ಮಾತನಾಡುವ ಮೊದಲು ವ್ಯಕ್ತಿಯೊಬ್ಬನ ಪೂರ್ವಾಪರ ತಿಳಿದು ಮಾತನಾಡಬೇಕಾಗಿದೆ' ಎಂದಿದ್ದಾರೆ.